Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಉಡುಪಿ ಜಿಲ್ಲೆಯ ಇಬ್ಬರಿಗೆ ಮಂತ್ರಿ ಯೋಗ!

ಉಡುಪಿ ಜಿಲ್ಲೆಯ ಇಬ್ಬರಿಗೆ ಮಂತ್ರಿ ಯೋಗ!

ಉಡುಪಿ ಜಿಲ್ಲೆಯ ಇಬ್ಬರಿಗೆ ಮಂತ್ರಿ ಯೋಗ!

(ಸುದ್ದಿಕಿರಣ ವರದಿ)

ಬೆಂಗಳೂರು: ಬೊಮ್ಮಾಯಿ ಸಂಪುಟದಲ್ಲಿ ಉಡುಪಿ ಜಿಲ್ಲೆಯ ಇಬ್ಬರಿಗೆ ಮಂತ್ರಿ ಯೋಗ ಪ್ರಾಪ್ತವಾಗಿದೆ. ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಸಚಿವ ಸ್ಥಾನ ಖಚಿತವಾಗಿದ್ದು, ಇಬ್ಬರಿಗೂ ವರಿಷ್ಠರಿಂದ ಕರೆ ಬಂದಿದೆ. ಇಬ್ಬರೂ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಕೆಲವು ಮಂದಿ ಹಿರಿಯ ಶಾಸಕರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿಕೊಳ್ಳುವ ನಿರೀಕ್ಷೆಯಂತೆ ಮಾಜಿ ಸಚಿವ ಕೋಟ ಹಾಗೂ ಸುನಿಲ್ ಇಬ್ಬರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದ್ದು, ಹಳೆಬೇರು ಹೊಸ ಚಿಗುರು ನೀತಿಯನ್ನು ಸಿಎಂ ಬೊಮ್ಮಾಯಿ ಅನುಸರಿಸಿದ್ದಾರೆ.

ಕೋಟ ಮತ್ತು ಸುನಿಲ್ ಇಬ್ಬರೂ ಆರ್.ಎಸ್.ಎಸ್.ನೊಂದಿಗೆ ನಿಕಟ ಸಂಪರ್ಕ ಹೊಂದಿರುವವರಾಗಿದ್ದಾರೆ.

ಸುನಿಲ್ ಕುಮಾರ್ ಕಾರ್ಕಳವನ್ನು ಶಾಸಕನಾಗಿ ಮೂರು ಬಾರಿ ಪ್ರತಿನಿಧಿಸಿದ್ದಾರೆ. ವಿಧಾನಸಭಾ ಮುಖ್ಯ ಸಚೇತಕರೂ ಆಗಿದ್ದರು.

ವಿಧಾನ ಪರಿಷತ್ ಸದಸ್ಯರಾಗಿ ಮೂರು ಬಾರಿ ಆಯ್ಕೆಯಾಗಿರುವ ಕೋಟ 2 ಬಾರಿ ಸಚಿವರಾಗಿ, ವಿರೋಧ ಪಕ್ಷ ನಾಯಕರಾಗಿ ಪ್ರಾಮಾಣಿಕ ಸಚಿವ ಎಂಬ ಜನಮನ್ನಣೆ ಪಡೆದಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!