Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಸುಧಾರಿತ ಇಮ್ಯುನೊ ವಿಶ್ಲೇಷಕ ಉದ್ಘಾಟನೆ

ಸುಧಾರಿತ ಇಮ್ಯುನೊ ವಿಶ್ಲೇಷಕ ಉದ್ಘಾಟನೆ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 22

ಸುಧಾರಿತ ಇಮ್ಯುನೊ ವಿಶ್ಲೇಷಕ ಉದ್ಘಾಟನೆ
ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆ ಜೀವ ರಸಾಯನಶಾಸ್ತ್ರ ಪ್ರಯೋಗಾಲಯದಲ್ಲಿ ಸುಧಾರಿತ ಇಮ್ಯುನೊ ವಿಶ್ಲೇಷಕ ಕೋಬಾಸ್ ಇ 801 ಯಂತ್ರವನ್ನು ಶುಕ್ರವಾರ ಕೆಎಂಸಿ ಡೀನ್ ಡಾ. ಶರತ್ ಕುಮಾರ್ ರಾವ್ ಉದ್ಘಾಟಿಸಿದರು.

ರೋಶ್ ಡಯಾಗ್ನೋಸ್ಟಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಸುಧಾರಿತ ಕೋಬಾಸ್ ಇ 801 ವಿಶ್ಲೇಷಣಾತ್ಮಕ ಘಟಕ, ಹೆಚ್ಚಿನ ಥ್ರೋಪುಟ್ ಇಮ್ಯುನೊಕೆಮಿಸ್ಟ್ರಿ ಮಾಡ್ಯೂಲ್ ಆಗಿದ್ದು, ಇದು ಹೆಚ್ಚು ನವೀನ ಮತ್ತು ಪೇಟೆಂಟ್ ಪಡೆದ ಎಲೆಕ್ಟ್ರೋ ಕೆಮಿ ಲುಮಿನೆಸೆನ್ಸ್ (ಇಅಐ) ತಂತ್ರಜ್ಞಾನ ಬಳಸಿಕೊಂಡು ವ್ಯಾಪಕ ಶ್ರೇಣಿಯ ವೈವಿಧ್ಯಮಯ ರೋಗ ನಿರೋಧಕ ಪರೀಕ್ಷೆಗಳನ್ನು ನಿರ್ವಹಿಸುತ್ತದೆ. ಅದರದಲ್ಲಿ ಸೀರಮ್, ಮೂತ್ರ ಮತ್ತು ಪ್ಲಾಸ್ಮಾ ಬಳಸಬಹುದು. ಈ ವಿಶ್ಲೇಷಕದ ಥ್ರೋಪುಟ್ ನಲ್ಲಿ ಗಂಟೆಗೆ 300 ಪರೀಕ್ಷೆ ನಡೆಸಬಹುದು.

ಈ ಯಂತ್ರ ಸ್ವಯಂಚಾಲಿತ ಕ್ಯಾಸೆಟ್ ನಿರ್ವಹಣಾ ವ್ಯವಸ್ಥೆ ಹೊಂದಿದೆ. ಅಂದರೆ ನೋಂದಣಿ, ಆಂತರಿಕ ಸಾಗಣೆ, ನಿಯೋಜನೆ ಮತ್ತು ವಿಲೇವಾರಿ. ಕಾರ್ಯಾಚರಣೆಯಲ್ಲಿರುವಾಗ ಕಾರಕ ಕ್ಯಾಸೆಟ್ ಗಳನ್ನು ಸ್ವಯಂಚಾಲಿತವಾಗಿ ಇಳಿಸುವುದು/ ಮರು ಲೋಡ್ ಮಾಡಲಿದೆ.

ಈ ವಿಶ್ಲೇಷಕದಲ್ಲಿ ನಡೆಸಲಾಗುವ ಪರೀಕ್ಷೆಗಳಾದ ಥೈರಾಯ್ಡ್ ಹಾರ್ಮೋನುಗಳು, ಲೈಂಗಿಕ ಹಾರ್ಮೋನುಗಳು, ಹೃದಯದ ಮಾರ್ಕರ್ ಗಳು, ಗೆಡ್ಡೆಯ ಮಾರ್ಕರ್ ಗಳು ಮತ್ತು ಗರ್ಭಧಾರಣೆಗೆ ಸಂಬಂಧಿತ ಸ್ಕ್ರೀನಿಂಗ್ ಮಾರ್ಕರ್ ಗಳು ಇತ್ಯಾದಿ ರೋಗ ನಿರ್ಣಯದಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ವಿಶ್ಲೇಷಕರದಲ್ಲಿ ಮಾದರಿ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಳಿಸಲು ಸರಾಸರಿ 20 ನಿಮಿಷ ಅಗತ್ಯವಿದೆ.

ಈ ಸಂದರ್ಭದಲ್ಲಿ ಮಣಿಪಾಲ ಬೋಧನಾ ಆಸ್ಪತೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ್ ವೇಣುಗೋಪಾಲ್, ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಕೆಎಂಸಿ ಸಹ ಡೀನ್ ಡಾ. ಕೃಷ್ಣಾನಂದ ಪ್ರಭು, ರೋಶ್ ಡಯಾಗ್ನೋಸ್ಟಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬ್ಯುಸಿನೆಸ್ ಲೀಡ್ ಡಾ. ಬಿಜೋಯ್ ಬಾಬು, ರಾಷ್ಟ್ರೀಯ ಕೀ ಅಕೌಂಟ್ ಮ್ಯಾನೇಜರ್ ಜಿಜು ಜೋಯ್ ಮೊದಲಾದವರಿದ್ದರು.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಪ್ರಯೋಗಾಲಯ ಸೇವೆಗಳ ನಿರ್ದೇಶಕ ಡಾ. ರವೀಂದ್ರ ಮರಡಿ ಸ್ವಾಗತಿಸಿ, ಜೀವ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ವರಶ್ರೀ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!