ಉಡುಪಿ: ಇಲ್ಲಿನ ಇಬ್ಬರು ಪೊಲೀಸರಿಗೆ 2020ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟಿಸಲಾಗಿದೆ.
ಉಡುಪಿ ಸೈಬರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಹಾಗೂ ಡಿಎಆರ್ ಹೆಡ್ ಕಾನ್ಸ್ಟೆಬಲ್ ಶಂಕರ್ ಮುಖ್ಯಮಂತ್ರಿ ಪದಕ ಪುರಸ್ಕೃತರು.
ರಾಮಚಂದ್ರ ನಾಯಕ್ ಗದಗ, ಬೆಂಗಳೂರು ನಗರ, ಬಳ್ಳಾರಿ, ಉಡುಪಿ ಠಾಣೆ, ನಕ್ಸಲ್ ನಿಗ್ರಹಪಡೆಯ ಪಿಎಸ್.ಐ ಆಗಿ, ಹೊಸನಗರ ವೃತ್ತ, ಮೂಲ್ಕಿ, ಮೂಡುಬಿದಿರೆ ಠಾಣೆಯ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಉಡುಪಿ ಸೆನ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದಾರೆ