Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ಈಶಪ್ರಿಯತೀರ್ಥರಿಗೆ ಅದಮಾರು ಮಠ ಶಿಕ್ಷಣ ಸಂಸ್ಥೆ ಹೊಣೆ?

ಈಶಪ್ರಿಯತೀರ್ಥರಿಗೆ ಅದಮಾರು ಮಠ ಶಿಕ್ಷಣ ಸಂಸ್ಥೆ ಹೊಣೆ?

ಈಶಪ್ರಿಯತೀರ್ಥರಿಗೆ ಅದಮಾರು ಮಠ ಶಿಕ್ಷಣ ಸಂಸ್ಥೆ ಹೊಣೆ?

ಉಡುಪಿ, ಡಿ. 26 (ಸುದ್ದಿಕಿರಣ ವರದಿ): ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಹೊಣೆಯನ್ನು ಶೀಘ್ರದಲ್ಲೇ ಶ್ರೀಮಠದ ಕಿರಿಯ ಯತಿ, ಪ್ರಸ್ತುತ ಪರ್ಯಾಯ ಪೀಠಾಧಿಪತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ವಹಿಸಿಕೊಡಲಾಗುತ್ತದೆಯೇ?

ಈ ಕುರಿತ ಸುಳಿವನ್ನು ಶಿಕ್ಷಣ ಸಂಸ್ಥೆಗಳ ಪ್ರಸ್ತುತ ಅಧ್ಯಕ್ಷ, ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರೇ ನೀಡಿದ್ದಾರೆ!

ಕೃಷ್ಣಮಠ ರಾಜಾಂಗಣದಲ್ಲಿ ಭಾನುವಾರ ನಡೆದ ವಿಶ್ವಾರ್ಪಣಮ್ ಸಮಾಪನ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದ ಶ್ರೀಪಾದರು, ಕೊರೊನಾ ದಿನಗಳಲ್ಲೂ ಶ್ರೀಮಠದ ಪರ್ಯಾಯವನ್ನು ಸಮರ್ಥವಾಗಿ ನಿರ್ವಹಿಸಿ, ತನ್ನ ವಿಭಿನ್ನ ಯೋಚನಾ ಲಹರಿಯ ಕಾರ್ಯಗಳ ಅನುಷ್ಠಾನದಿಂದ ನಿಜಾರ್ಥದಲ್ಲಿ ಈಶಪ್ರಿಯರಾಗಿದ್ದಾರೆ ಎಂದು ಶ್ಲಾಘಿಸುತ್ತಲೇ, ತನ್ನ ಶಿಷ್ಯರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅದಮಾರು ಮಠದ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ಸಮರ್ಥರಿದ್ದಾರೆ ಎಂಬುದು ತಮ್ಮ ಮನಸ್ಸಿಗೆ ಬರುತ್ತಿದೆ ಎಂದು ಹೇಳಿದರು.

ಈಚೆಗೆ ಅದಮಾರು ಮಠ ಒಡೆತನದ ಎರಡೂ ಅತಿಥಿಗೃಹಗಳ ನಿರ್ವಹಣೆಯನ್ನು ಕಿರಿಯ ಶ್ರೀಪಾದರಿಗೆ ಹಿರಿಯ ಶ್ರೀಪಾದರು ವಹಿಸಿಕೊಟ್ಟಿದ್ದಾರೆ.

ಶ್ರೀ ವಿಶ್ವಪ್ರಿಯತೀರ್ಥರು ಲೌಕಿಕ ವ್ಯವಹಾರಗಳನ್ನೆಲ್ಲ ತೊರೆದು, ಹರಿದ್ವಾರಕ್ಕೆ ತೆರಳಿ ಆಧ್ಯಾತ್ಮಿಕ ಸಾಧನೆಯತ್ತ ಗಮನಹರಿಸಲು ನಿಶ್ಚಯಿಸಿದ್ದಾರೆ ಎಂಬ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!