Saturday, July 2, 2022
Home ಸಮಾಚಾರ `ಸಚಿವ ಈಶ್ವರಪ್ಪಗೆ ಕೂಡಲೇ ಚಿಕಿತ್ಸೆ ಕೊಡಿಸಿ'

`ಸಚಿವ ಈಶ್ವರಪ್ಪಗೆ ಕೂಡಲೇ ಚಿಕಿತ್ಸೆ ಕೊಡಿಸಿ’

`ಸಚಿವ ಈಶ್ವರಪ್ಪ ಅಅವರಿಗೆ ಕೂಡಲೇ ಚಿಕಿತ್ಸೆ ಕೊಡಿಸಿ’

(ಸುದ್ದಿಕಿರಣ ವರದಿ)
ಉಡುಪಿ: ಸಚಿವ ಈಶ್ವರಪ್ಪ ಮೆದುಳಿನ ಸಮತೋಲನ ತಪ್ಪಿದೆ, ಕೂಡಲೇ ಚಿಕಿತ್ಸೆ ಕೊಡಿಸಿ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಸಲಹೆ ನೀಡಿದ್ದಾರೆ.

ಸಚಿವ ಕೆ. ಎಸ್. ಈಶ್ವರಪ್ಪ ಈಚೆಗೆ ಕಾಂಗ್ರೆಸ್ಸಿನವರು ಕುಡುಕ ಸು… ಮಕ್ಕಳು.. ಎಂದು ಬೆಂಗಳೂರಿನ ವಿಧಾನಸೌಧ ಬಳಿ ಅವಾಚ್ಯವಾಗಿ ಹೇಳಿಕೆ ನೀಡಿರುವುದರ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ಕಿಡಿಕಾರಿದ್ದಾರೆ.

ಇದು ಅವಾಚ್ಯ ಮತ್ತು ಅವಹೇಳನಕಾರಿ. ವಿಧಾನಸೌಧಕ್ಕೆ ಬಹಳ ಪಾವಿತ್ರ್ಯತೆ ಇದೆ. ಈಶ್ವರಪ್ಪ ಒಬ್ಬ ಅನಾಗರಿಕ ವ್ಯಕ್ತಿ ಎಂದು ಸೊರಕೆ ವಿಶ್ಲೇಷಿಸಿದರು.

ಸಚಿವ ಈಶ್ವರಪ್ಪ ಮೆದುಳಿನ ಸಮತೋಲನ ತಪ್ಪಿದೆ. ಬಿಜೆಪಿ ಅವರ ಮೆದುಳಿನ ಪರೀಕ್ಷೆ ಮಾಡಿಸಬೇಕು. ತಲೆಯ ಪರೀಕ್ಷೆ ನಡೆಸದಿದ್ದರೆ ಮುಂದೆ ರಾಜ್ಯ ಅನಾಹುತ ಎದುರಿಸಬೇಕಾದೀತು.

ಕೂಡಲೇ ಈಶ್ವರಪ್ಪ ಅವರನ್ನು ಚಿಕಿತ್ಸೆಗೊಳಪಡಿಸಬೇಕು ಎಂದರು.

ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯನವರು ಈಶ್ವರಪ್ಪನವರ ಮೆದುಳಿಗೂ ನಾಲಿಗೆಗೂ ಸಂಬಂಧ ಇಲ್ಲ ಎಂದು ಹೇಳಿದ್ದರು. ಆಗಾಗ ಇದು ಸಾಬೀತಾಗುತ್ತಿದೆ ಎಂದು ಸೊರಕೆ ಕುಹಕವಾಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!