ಸುದ್ದಿಕಿರಣ ವರದಿ
ಗುರುವಾರ, ಜನವರಿ 13, 2022
`ಉಡಾ’ದಲ್ಲಿ ಎಸಿಬಿ ದಾಳಿ
ಉಡುಪಿ: ಇಲ್ಲಿನ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ (ಉಡಾ)ದ ಮೇಲೆ ಗುರುವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ವಾಣಿಜ್ಯ ಉದ್ದೇಶಕ್ಕೆ ಪರವಾನಿಗೆ ನೀಡಲು 2.5 ಲಕ್ಷ ರೂ. ಲಂಚ ಪಡೆಯುತ್ತಿದ್ದ ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ನಗರ ಮತ್ತು ಗ್ರಾಮೀಣ ಯೋಜನೆ ಸಹಾಯಕ ನಿರ್ದೇಶಕ ಗುರುಪ್ರಸಾದ್, ಅಧಿಕಾರಿಗಳಾದ ಪ್ರಸಾದ್ ಮತ್ತು ನಯಿಮಾ ಸಯೀದ್ ಬಂಧಿತರು.
ಪ್ರಾಧಿಕಾರ ವ್ಯಾಪ್ತಿಯಲ್ಲಿ 77 ಸೆಂಟ್ಸ್ ವಸತಿ ಜಾಗವನ್ನು ವಾಣಿಜ್ಯ ಪ್ರದೇಶವಾಗಿ ಭೂ ಪರಿವರ್ತನೆ ಮಾಡಲು ಅಧಿಕಾರಿಗಳು 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಆ ಬಗ್ಗೆ ಅರ್ಜಿದಾರರು ಎಸಿಬಿಗೆ ಮಾಹಿತಿ ನೀಡಿದ್ದು, 2.5 ಲಕ್ಷ ರೂ. ಹಣ ಪಾವತಿ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಎಸಿಬಿ ಎಸ್.ಪಿ ಸೈಮನ್ ಮತ್ತು ಡಿವೈಎಸ್.ಪಿ ಮಂಜುನಾಥ ಕವರಿ ನೇತೃತ್ವದಲ್ಲಿ ದಾಳಿ ನಡೆದಿತ್ತು