Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಉಡುಪಿ ತಲುಪಿದ ಸೈಕಲ್ ಅಭಿಯಾನ

ಉಡುಪಿ ತಲುಪಿದ ಸೈಕಲ್ ಅಭಿಯಾನ

ಉಡುಪಿ: ಸೈಕಲ್ ಬಳಕೆಯ ಅಗತ್ಯತೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುತ್ತ ಹರಿಯಾಣದಿಂದ ಸೈಕಲ್ ನಲ್ಲೇ ಬಂದಿರುವ ಯಾತ್ರೆಯಲ್ಲಿ ಸಾಮಾಜಿಕ ಕಾರ್ಯಕರ್ತ ಸುನೀತ್ ಮಲಿಕ್ ಅವರನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಮತ್ತು ಮಹಮ್ಮದ್ ಇಲ್ಲಿನ ಮಾರುತಿ ವೀಥಿಕಾದಲ್ಲಿರುವ ಸಮಿತಿ ಕಚೇರಿ ಆವರಣದಲ್ಲಿ ಸ್ವಾಗತಿಸಿ, ಅಭಿನಂದಿಸಿದರು.
ರಾತ್ರಿ ತಂಗಲು ಸೂಕ್ತ ವಸತಿ ವ್ಯವಸ್ಥೆಯನ್ನು ಉಚಿತವಾಗಿ ಒದಗಿಸಿದರು.

ಸುನೀತ್ ಮಲಿಕ್ ಕಳೆದ ಜ. 26ರಂದು ಜಾಗೃತಿ ಸೈಕಲ್ ಯಾತ್ರೆಯನ್ನು ಹರಿಯಾಣದ ಸೋನಿಪತ್ ಜಿಲ್ಲೆಯಿಂದ ಕೈಗೊಂಡಿದ್ದು, ಈಗಾಗಲೇ ಆರು ರಾಜ್ಯ ಕ್ರಮಿಸಿ, 54ನೇ ದಿನದಲ್ಲಿ ಉಡುಪಿಗೆ ಬಂದು ತಲುಪಿದ್ದಾರೆ. ಇದುವರೆಗೆ ಅವರು 4 ಸಾವಿರ ಕಿ. ಮೀ. ಕ್ರಮಿಸಿದ್ದಾರೆ. ಕೇರಳ ಮೂಲಕ ಕನ್ಯಾಕುಮಾರಿ, ಚೆನ್ನೈಗೆ ತೆರಳಿ ಬೆಂಗಳೂರಿನಲ್ಲಿ ಯಾತ್ರೆ ಸಮಾಪನಗೊಳಿಸುವ ಆಶಯ ಹೊಂದಿದ್ದಾರೆ.

ಸುನೀತ್ ಮಲಿಕ್ ದಾರಿಯುದ್ದಕ್ಕೂ ಸಿಗುವ ಕಾಲೇಜುಗಳನ್ನು ಸಂಪರ್ಕಿಸಿ, ಪರಿಸರ ಸ್ನೇಹಿ ಸೈಕಲ್ ಬಳಕೆಯಿಂದ ದೈಹಿಕ ಆರೋಗ್ಯ ದೃಢತೆ, ಇಂಧನ ಉಳಿತಾಯ, ಪರಿಸರ ಮಾಲಿನ್ಯದಿಂದ ಮುಕ್ತಿ ಮುಂತಾದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುತ್ತಿದ್ದಾರೆ.

24ರ ಹರೆಯದ ಸುನೀತ್ ಮಲಿಕ್ ಇಂಜಿನಿಯರ್ ಪದವಿಧರರಾಗಿದ್ದು ಪ್ರತಿಷ್ಠಿತ ಕಂಪೆನಿಯ ಉದ್ಯೋಗಿ. ಅವರ ತಂದೆ ಭಾರತೀಯ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!