Saturday, August 13, 2022
Home ಸಮಾಚಾರ ರಾಜ್ಯ ವಾರ್ತೆ ಉಡುಪಿಯಲ್ಲಿ ತ್ರಿವಳಿ ಮಕ್ಕಳ ಹೆತ್ತಳಾ ಮಹಾತಾಯಿ!

ಉಡುಪಿಯಲ್ಲಿ ತ್ರಿವಳಿ ಮಕ್ಕಳ ಹೆತ್ತಳಾ ಮಹಾತಾಯಿ!

ಸುದ್ದಿಕಿರಣ ವರದಿ
ಗುರುವಾರ, ಜುಲೈ 7

ಉಡುಪಿಯಲ್ಲಿ ತ್ರಿವಳಿ ಮಕ್ಕಳ ಹೆತ್ತಳಾ ಮಹಾತಾಯಿ!
ಉಡುಪಿ: ಇಲ್ಲಿನ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಂಕೋಲ ಮೂಲದ ಸಿದ್ದಿ‌ ಜನಾಂಗದ ಸುನಿತಾ (27) ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಆಸ್ಪತ್ರೆಯ ಡಾ. ಕವಿಶಾ ಭಟ್, ಡಾ. ರಜನಿ ಕಾರಂತ್, ಡಾ. ಸೂರ್ಯನಾರಾಯಣ, ಡಾ. ಗಣಪತಿ ಹೆಗಡೆ ಹಾಗೂ ಡಾ. ಮಹಾದೇವ ಭಟ್ ತಜ್ಞ ವೈದ್ಯರ ತಂಡ 27 ವರ್ಷ ಪ್ರಾಯದ ಸಿದ್ದಿ ಜನಾಂಗದ ಗರ್ಭಿಣಿಗೆ ಯಶಸ್ವಿ ಸಿಸೇರಿಯನ್ ಹೆರಿಗೆ ಮಾಡಿಸಿದ್ದಾರೆ.

ಎರಡು ಗಂಡು ಮತ್ತು ಒಂದು ಹೆಣ್ಣು ಶಿಶುವಾಗಿದ್ದು, ಅನುಕ್ರಮವಾಗಿ 2.05 ಮತ್ತು 2.100 ಹಾಗೂ 1.700 ಕೆ.ಜಿ. ತೂಕ ಹೊಂದಿರುವುದಾಗಿ ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್ ತಿಳಿಸಿದ್ದಾರೆ.

ತಾಯಿ ಮತ್ತು ತ್ರಿವಳಿ ಶಿಶುಗಳು ಆರೋಗ್ಯವಾಗಿದ್ದಾರೆ ಎಂದು ಡಾ. ನಾಯಕ್ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!