Tuesday, May 17, 2022
Home ಸಮಾಚಾರ ಅಪರಾಧ ಉದ್ಯಮದಲ್ಲಿ ನಷ್ಟ: ಆತ್ಮಹತ್ಯೆಗೆ ಶರಣು

ಉದ್ಯಮದಲ್ಲಿ ನಷ್ಟ: ಆತ್ಮಹತ್ಯೆಗೆ ಶರಣು

ಸುದ್ದಿಕಿರಣ ವರದಿ
ಸೋಮವಾರ, ಮೇ 9

ಉದ್ಯಮದಲ್ಲಿ ನಷ್ಟ: ಆತ್ಮಹತ್ಯೆಗೆ ಶರಣು
ಬ್ರಹ್ಮಾವರ: ಉದ್ಯೋಗದಲ್ಲಿ ನಷ್ಟ ಸಂಭವಿಸಿದ್ದರಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ಕಟ್ಟಿಂಗೇರಿ ಎಡ್ಮೇರು ಎಂಬಲ್ಲಿ ಸೋಮವಾರ ಸಂಭವಿಸಿದೆ.
ಮೃತಳನ್ನು ಸಹನಾ (23) ಎಂದು ಗುರುತಿಸಲಾಗಿದೆ.

ಎಂಬಿಎ ಪದವೀಧರೆಯಾದ ಆಕೆ ಕಳೆದ ಸುಮಾರು ಒಂದೂವರೆ ವರ್ಷದ ಹಿಂದೆ ಹಾಸನದಲ್ಲಿ ಸುಮಾರು 14 ಲಕ್ಷ ರೂ. ಖರ್ಚು ಮಾಡಿ ಹೊಟೇಲ್ ವ್ಯವಹಾರ ಆರಂಭಿಸಿದ್ದರು.

ಆದರೆ, ಹೋಟೆಲ್ ವ್ಯವಹಾರದಲ್ಲಿ ನಷ್ಟವುಂಟಾಗಿದ್ದು, ಕಳೆದ 6 ತಿಂಗಳಿಂದ ಮನೆಯಲ್ಲಿಯೇ ಇದ್ದರು.

ವ್ಯವಹಾರದಲ್ಲಿನ ನಷ್ಟದಿಂದಾಗಿ ಖಿನ್ನತೆಗೊಳಗಾಗಿದ್ದ ಸಹನಾ, ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!