ಉಡುಪಿ: ಸಮಾಜ ಸುಧಾರಣೆಯ ಆಶಯದೊಂದಿಗೆ ಬೀದರ್ ನಿಂದ ಸುಮಾರು 12 ಸಾವಿರ ಕಿ.ಮೀ. ಏಕಾಂಗಿಯಾಗಿ ಪಾದಯಾತ್ರೆ ಕ್ರಮಿಸುವ ಆಶಯ ಹೊಂದಿರುವ ಬೆಂಗಳೂರಿನ ವಿವೇಕಾನಂದ ಎಚ್.ಕೆ. ಶುಕ್ರವಾರ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದರು.
ಮಾನವೀಯತೆ, ಮಾನವೀಯ ಮೌಲ್ಯಗಳ ಬಗ್ಗೆ ತಿಳಿಹೇಳುತ್ತಾ, ಸಾಮಾಜಿಕ ಸುಧಾರಣೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಲಾಗದಿದ್ದರೂ ಸಣ್ಣ ಪ್ರಯತ್ನವಾಗಿ ರಾಜ್ಯದ 240 ತಾಲೂಕುಗಳನ್ನೂ ಅಲ್ಲಿಯ ಕಾಲೇಜು ಮಠ ಮಂದಿರ ಆಸ್ಪತ್ರೆ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮನದಾಳದ ಅಳಲು ಅಭಿವ್ಯಕ್ತಪಡಿಸುತ್ತಾ, ತನ್ನ ಮನೆಯಲ್ಲಿರುವ ತಾಯಿ ಮಡದಿ, ಮಗನಿಂದ 8,500 ಕಿ. ಮೀ. ಈಗಾಗಲೇ ಕ್ರಮಿಸಿ, ಇನ್ನು ಮುಂದಿನ 3,500 ಕಿ. ಮೀ. ದೂರವನ್ನು ಚಳಿ ಮಳೆ ಬಿಸಿಲೆನ್ನದೆ ಗಂಟೆಗೆ ಸುಮಾರು 5 ಕಿ.ಮೀ.ನಂತೆ ನಿತ್ಯ ಕ್ರಮಿಸುತ್ತಾ ಸಾಮಾಜಿಕ ಸುಧಾರಣೆಯಲ್ಲಿ ಬದುಕಿನ ಸಮಗ್ರ ಚಿಂತನೆಯಲ್ಲಿ ತೊಡಗಿಕೊಂಡಿರುವುದಾಗಿ ಅವರು ತಿಳಿಸಿದರು.
ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಅವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕ ಗೋವಿಂದರಾಜ್ ಮತ್ತು ಕಾರ್ಯದರ್ಶಿ ರೋಹಿತ್ ತಂತ್ರಿ ಹಾಗೂ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಿಷ್ಣು ಪಾಡಿಗಾರ್ ಇದ್ದರು