Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಐದನೇ ವರ್ಷದ ಕಿರು ಪಾದಯಾತ್ರೆ ಪೂರೈಸಿದ ಪರಿವ್ರಾಜಕ

ಐದನೇ ವರ್ಷದ ಕಿರು ಪಾದಯಾತ್ರೆ ಪೂರೈಸಿದ ಪರಿವ್ರಾಜಕ

ಉಡುಪಿ: ಕಾಲ್ನಡಿಗೆಯಲ್ಲೇ ಪ್ರತೀ ವರ್ಷ ಪಾದಯಾತ್ರೆ ನಡೆಸುವ, ನಿಜಾರ್ಥದ ಪರಿವ್ರಾಜಕ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಮ್ಮ 5ನೇ ವರ್ಷದ ಉಡುಪಿ- ನೀಲಾವರ ಕಿರು ಪಾದಯಾತ್ರೆಯನ್ನು ಭಾನುವಾರ ನಡೆಸಿದರು.
ಕಳೆದ ಮೂರು ದಶಕಗಳಿಂದ ಪೇಜಾವರ ಶ್ರೀಗಳು ಪಾದಯಾತ್ರೆ ನಡೆಸುತ್ತಾರೆ. ಉತ್ತರ ಕನ್ನಡದ ಸೋದೆಯಿದಿಂದ ಆರಂಭಿಸಿ ಬದರಿ ವರೆಗೆ ಕೈಗೊಂಡ ಪಾದಯಾತ್ರೆಯನ್ನು 2014ರಲ್ಲಿ ಪೂರ್ಣಗೊಳಿಸಿದ್ದರು. ಆನಂತರ ಪೇಜಾವರ ಮಠ ಪರ್ಯಾಯದ ಅವಧಿಯಲ್ಲಿ ಉತ್ತರ ಭಾರತದ ಧಾರ್ಮಿಕ ಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಆಚಾರ್ಯ ಮಧ್ವರ ಶಿಷ್ಯ ಪರಂಪರೆಯಲ್ಲಿ ಬರುವ ಪೇಜಾವರ ಶ್ರೀಪಾದರು, ಧರ್ಮ ಜಾಗೃತಿಗಾಗಿ ಪಾದಯಾತ್ರೆ ನಡೆಸುತ್ತಾ ಬಂದಿದ್ದು, ಅದನ್ನು ಕೈಬಿಡದೇ ಕಳೆದ 5 ವರ್ಷದಿಂದ ಗೋಪಾಲ ಸನ್ನಿಧಿಯಾದ ಉಡುಪಿಯಿಂದ ಗೋಶಾಲೆ ನೀಲಾವರ ವರೆಗೆ ಕಿರು ಪಾದಯಾತ್ರೆ ನಡೆಸುವ ಸಂಪ್ರದಾಯ ಇರಿಸಿಕೊಂಡಿದ್ದಾರೆ.
ಭಾನುವಾರ ಮುಂಜಾನೆ ಉಡುಪಿ ಕೃಷ್ಣ ಮಠದ ಆವರಣದಲ್ಲಿರುವ ಪೇಜಾವರ ಮಠದಿಂದ ಭಕ್ತರ ಜೊತೆ ನೀಲಾವರ ಗೋಶಾಲೆಯ ವರೆಗೂ ಕಾಲ್ನಡಿಗೆಯಲ್ಲಿ ಸಾಗಿದ್ದಾರೆ. ಬಳಿಕ ನೀಲಾವರದಲ್ಲಿ ಕಾಳೀಯಮರ್ಧನ ಕೃಷ್ಣನಿಗೆ ಪೂಜೆ ಸಲ್ಲಿಸಿ, ಪಾದಯಾತ್ರೆ ಸಮಾಪನಗೊಳಿಸಿದರು.
ನಂತರ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!