Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಔಷಧೀಯ ಸಸಿ ವಿತರಣೆ

ಔಷಧೀಯ ಸಸಿ ವಿತರಣೆ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 11

ಔಷಧೀಯ ಸಸಿ ವಿತರಣೆ
ಮಣಿಪಾಲ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ವತಿಯಿಂದ ವರ್ಷಂಪ್ರತಿಯಂತೆ ಔಷಧೀಯ ಸಸ್ಯಗಳನ್ನು ಬೆಳೆಸಿ, ಉಳಿಸಲು ಪ್ರೋತ್ಸಾಹಿಸುವ ಸಲುವಾಗಿ ಸಂಸ್ಥೆಆಯೋಜಿಸುತ್ತಿರುವ ವನಮಹೋತ್ಸವ ಸಪ್ತಾಹ ಅಂಗವಾಗಿ ಜುಲೈ 13ರಂದು ಗುರು ಪೂರ್ಣಿಮೆ ಪರ್ವಕಾಲದಲ್ಲಿ ಸಂಸ್ಥೆ ಆವರಣದಲ್ಲಿ ಆಸಕ್ತ ಸಾರ್ವಜನಿಕರಿಗೆ ವಿವಿಧ ಜಾತಿಯ ಔಷಧೀಯ ಸಸಿಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಅಂದು ಮುಂಜಾನೆ 9.30ರಿಂದ ಅಪರಾಹ್ನ 4ರ ತನಕ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಔಷಧೀಯ ಸಸ್ಯಗಳಾದ ಬಿಲ್ವಪತ್ರೆ, ಪುನರ್ಪುಳಿ, ಹೊಂಗೆ, ಆರೋರೊಟ್, ಕಾಡು ಬಾದಾಮಿ, ತೇಗ ಇತ್ಯಾದಿ ವಿವಿಧ ಜಾತಿಯ ಒಟ್ಟು ನಾಲ್ಕು ಆಯ್ದ ಗಿಡಗಳನ್ನು ಪ್ರತಿಯೊಬ್ಬರಿಗೂ ಕೊಡಲಾಗುತ್ತಿದೆ.

ಸಾರ್ವಜನಿಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!