Saturday, August 13, 2022
Home ಸಮಾಚಾರ ಅಪರಾಧ ಕಟಪಾಡಿ ಅರ್ಚಕ ಅಪಘಾತದಲ್ಲಿ ಸಾವು

ಕಟಪಾಡಿ ಅರ್ಚಕ ಅಪಘಾತದಲ್ಲಿ ಸಾವು

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 22

ಕಟಪಾಡಿ ಅರ್ಚಕ ಅಪಘಾತದಲ್ಲಿ ಸಾವು
ಸುರತ್ಕಲ್: ಇಲ್ಲಿನ ಗೋವಿಂದದಾಸ್ ಕಾಲೇಜು ಬಳಿ ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರನ್ನು ಉಡುಪಿ ಕಟಪಾಡಿ ಮಟ್ಟು ನಿವಾಸಿ, ಅರ್ಚಕ ಅಕ್ಷಯ ಕೆ. ಆರ್ (33) ಎಂದು ಗುರುತಿಸಲಾಗಿದೆ.

ಕಟಪಾಡಿ ಮೂಡಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಾಗಿರುವ ಅಕ್ಷಯ್, ಸುರತ್ಕಲ್ ನಲ್ಲಿ ಪೂಜೆ ಮುಗಿಸಿ ತನ್ನ ಬೈಕಿನಲ್ಲಿ ಕಟಪಾಡಿಗೆ ಹಿಂತಿರುಗಿ ಬರುವ ವೇಳೆ ಅಪಘಾತ ಸಂಭವಿಸಿದೆ.

ಅಕ್ಷಯ್ ಅವರು ಮಂಗಳೂರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಟಪಾಡಿಯ ತನ್ನ ಮನೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಸುರತ್ಕಲ್ ಗೋವಿಂದ ದಾಸ ಕಾಲೇಜು ಮುಂಭಾಗದಲ್ಲಿ ಲಾರಿಯ ಚಕ್ರದಡಿಗೆ ಸಿಲುಕಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಸ್ಥಳಕ್ಕಾಗಮಿಸಿ, ಪ್ರಕರಣ ದಾಖಲಿಸಿದ್ದಾರೆ.

ಇದೇ ಸ್ಥಳದಲ್ಲಿ ಈಚೆಗೆ ಸುರತ್ಕಲ್ ನಿವಾಸಿ, ಎಲ್.ಐ.ಸಿ ಪ್ರತಿನಿಧಿಯೋರ್ವರು ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!