Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಹತ್ಯೆ ಬೆದರಿಕೆ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮನವಿ

ಹತ್ಯೆ ಬೆದರಿಕೆ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮನವಿ

ಸುದ್ದಿಕಿರಣ ವರದಿ
ಮಂಗಳವಾರ, ಜೂನ್ 14

ಹತ್ಯೆ ಬೆದರಿಕೆ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮನವಿ
ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ಮೀನುಗಾರ ಮುಖಂಡ ಯಶಪಾಲ್ ಸುವರ್ಣ ಅವರಿಗೆ ಹತ್ಯೆ ಬೆದರಿಕೆಯ ಪ್ರಚೋದನಾಕಾರಿ ಪೋಸ್ಟ್ ಮಾಡಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಲ್ಪೆ ಮೀನುಗಾರ ಮಹಿಳೆಯರ ಸಂಘ ಹಾಗೂ ಪಡುತೋನ್ಸೆ ಬೆಂಗ್ರೆ ಶ್ರೀ ದುರ್ಗಾನಿಧಿ ಮಹಿಳಾ ಮೀನುಗಾರ ಸಹಕಾರಿ ಸಂಘದ ವತಿಯಿಂದ ಜಲಜ ಕೋಟ್ಯಾನ್ ನೇತೃತ್ವದಲ್ಲಿ ಮಂಗಳವಾರ ಎಸ್.ಪಿಗೆ ಮನವಿ ಸಲ್ಲಿಸಲಾಯಿತು.

ಎಸ್.ಪಿ ಅನುಪಸ್ಥಿತಿಯಲಿ ಡಿವೈಎಸ್.ಪಿ ಮನವಿ ಸ್ವೀಕರಿಸಿದರು.

ಪಡುತೋನ್ಸೆ ಬೆಂಗ್ರೆ ಶ್ರೀ ದುರ್ಗಾನಿಧಿ ಮಹಿಳಾ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷೆ ಮಾಲತಿ ಶ್ರೀಯಾನ್ ಮಾತನಾಡಿ, ಮಹಿಳಾ ಮೀನುಗಾರರನ್ನು ಸಂಘಟಸಿ ಸರಕಾರದ ಯೋಜನೆ, ಸವಲತ್ತುಗಳನ್ನು ದೊರಕಿಸಿಕೊಟ್ಟ ಮೀನುಗಾರ ಮುಖಂಡ ಯಶಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಜೀವ ಬೆದರಿಕೆ ಹಾಕುತ್ತಿರುವ ದುಷ್ಕರ್ಮಿಗಳನ್ನು ಪೊಲೀಸ್ ಇಲಾಖೆ ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸಮಸ್ತ ಮೀನುಗಾರ ಮಹಿಳೆಯರ ಪರವಾಗಿ ಆಗ್ರಹಿಸಿದ್ದು, ತಪ್ಪಿದಲ್ಲಿ ಕರಾವಳಿ ಜಿಲ್ಲೆಯ ಸುಮಾರು 9 ಸಾವಿರ ಮಹಿಳಾ ಮೀನುಗಾರರು ಉಗ್ರ ಹೋರಾಟ ನಡೆಸಲಿದ್ದೇವೆ ಎಂದರು.

ಮಲ್ಪೆ ಮೀನುಗಾರ ಮಹಿಳೆಯರ ಸಂಘದ ಅಧ್ಯಕ್ಷೆ ಜಲಜ ಎಸ್. ಕೋಟ್ಯಾನ್, ಉಪಾಧ್ಯಕ್ಷೆ ಸುಮಿತ್ರಾ ಕುಂದರ್, ಕಾರ್ಯದರ್ಶಿ ಮಂಗಳಾ ತಿಲಕ್, ಶೋಭಾ ಸಾಲ್ಯಾನ್, ಶಶಿಕಲಾ ರಮೇಶ್, ಸುಜಾತ ರವಿ, ದುರ್ಗಾನಿಧಿ ಸದಸ್ಯರಾದ ಶಾಲಿನಿ ಸುರೇಶ್, ಜ್ಯೋತಿ ವಿ. ಸಾಲ್ಯಾನ್, ಸಬಿತಾ ಗಂಗಾಧರ, ಕುಮುದಾಕ್ಷಿ ಸುವರ್ಣ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!