Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಮಾ. 4: ಕಡಿಯಾಳಿಗೆ ನೂತನ ಕೊಡಿಮರ ಆಗಮನ

ಮಾ. 4: ಕಡಿಯಾಳಿಗೆ ನೂತನ ಕೊಡಿಮರ ಆಗಮನ

ಸುದ್ದಿಕಿರಣ ವರದಿ
ಗುರುವಾರ, ಮಾರ್ಚ್ 3

ಮಾ. 4: ಕಡಿಯಾಳಿಗೆ ನೂತನ ಕೊಡಿಮರ ಆಗಮನ
ಉಡುಪಿ: ನವೀಕರಣಗೊಂಡು ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಸಡಗರದಲ್ಲಿರುವ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಡುವ ನೂತನ ಕೊಡಿಮರ (ಧ್ವಜಸ್ಥಂಭ)ವನ್ನು ಮಾರ್ಚ್ 4ರಂದು ವೈಭವದ ಮೆರವಣಿಗೆ ಮೂಲಕ ತರಲಾಗುವುದು.

ಅಂದು ಸಂಜೆ 4 ಗಂಟೆಗೆ ಜೋಡುಕಟ್ಟೆಯಿಂದ ಕಡಿಯಾಳಿ ದೇವಸ್ಥಾನದ ವರೆಗೆ ನೂತನ ಧ್ವಜಸ್ತಂಭದ ಶೋಭಾಯಾತ್ರೆ ಹೊರಡಲಿದೆ.

ವೈಭವದ ಶೋಭಾಯಾತ್ರೆ ಕವಿ ಮುದ್ದಣ್ಣ ಮಾರ್ಗ, ಶಿರಿಬೀಡು, ಕಲ್ಸಂಕ ಮೂಲಕ ಶ್ರೀಕ್ಷೇತ್ರ ತಲುಪಲಿದೆ.

ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಚಾಲನೆ ನೀಡಲಿದ್ದಾರೆ.

ಶಾಸಕ ಕೆ ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್,ಶ್ರೀ ದೇವಸ್ಥಾನದ ವಾಸ್ತು ತಜ್ಞ ಗುಂಡಿಬೈಲ್ ವಿದ್ವಾನ್ ಸುಬ್ರಹ್ಮಣ್ಯ ಭಟ್, ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ರವಿರಾಜ್ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ, ಮೊದಲಾದವರು ಭಾಗವಹಿಸುವರು ಎಂದು ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!