Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಕಡಿಯಾಳಿ ಶಾಲೆಗೆ ಕೊಡುಗೆ

ಕಡಿಯಾಳಿ ಶಾಲೆಗೆ ಕೊಡುಗೆ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 25

ಕಡಿಯಾಳಿ ಶಾಲೆಗೆ ಕೊಡುಗೆ
ಉಡುಪಿ: ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ 21 ಮಂದಿ ವಿದ್ಯಾರ್ಥಿಗಳನ್ನು ರೋಟರಿ ಉಡುಪಿ ದತ್ತು ತೆಗೆದುಕೊಂಡು, ಅವರ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವಂತೆ ಸಮವಸ್ತ್ರ, ಪುಸ್ತಕ, ಕೊಡೆ ಇತ್ಯಾದಿ ವಿತರಣೆ ಕಾರ್ಯಕ್ರಮ ಈಚೆಗೆ ನಡೆಯಿತು.

ಕೊಡುಗೆಗಳನ್ನು ವಿತರಿಸಿದ ರೋಟರಿ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ, ರೋಟರಿ ಮತ್ತು ಕಡಿಯಾಳಿ ಶಾಲೆಯ ಸಂಬಂಧ ಅನೇಕ ವರ್ಷಗಳಿಂದಿದ್ದು, ಶಾಲೆಯ ಅಭಿವೃದ್ಧಿಯಲ್ಲಿ ರೋಟರಿ ಕೊಡುಗೆ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ಅದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.

ರೋಟರಿ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗುರುರಾಜ ಭಟ್, ಖಜಾಂಚಿ ಗೋಪಾಲಕೃಷ್ಣ ಪ್ರಭು, ಸಮಾಜ ಸೇವಾ ನಿರ್ದೇಶಕಿ ದೀಪಾ ಭಂಡಾರಿ ಇದ್ದರು.

ಶಾಲಾ ಮುಖ್ಯೋಪಾಧ್ಯಾಯ ಚಂದ್ರಶೇಖರ ನಾಯಕ್ ನಿರೂಪಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!