Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಕನ್ನಡ ಜಾಗೃತಿ ಅಭಿಯಾನ

ಕನ್ನಡ ಜಾಗೃತಿ ಅಭಿಯಾನ

ಉಡುಪಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶಯದಂತೆ ಉಡುಪಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ರಂಗ ನಟರಾದ ಸುಕುಮಾರ್ ಮೋಹನ್ ಮತ್ತು ಶಿಲ್ಪಾ ಜೋಷಿ ಹಾಗೂ ಸಾಹಿತಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಈಚೆಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಭೇಟಿ ನೀಡಿದರು.

ಕನ್ನಡದಲ್ಲೇ ನಿತ್ಯ ಸರಿಗನ್ನಡದಲ್ಲಿ ವ್ಯವಹರಿಸುವ ಮೂಲಕ ಕನ್ನಡ ನಾಡಿನಲ್ಲಿ ಸಿರಿಕನ್ನಡವನ್ನು ಉಳಿಸುವ ಬೆಳೆಸುವ ಎಂಬ ಹಕ್ಕೊತ್ತಾಯದ ವಿನಂತಿಪತ್ರವನ್ನು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅವರಿಗೆ ನೀಡಿದರು.

ಕರುನಾಡಿನ ಎಲ್ಲ ಬಗೆಯ ಓದುಗರು, ಕೇಳುಗರು ಮತ್ತು ವೀಕ್ಷಕರ ಪರವಾಗಿ ನಾವು ನಿಮ್ಮೊಂದಿಗೆ ಹಕ್ಕೊತ್ತಾಯ ಮಾಡುತ್ತೇವೆ. ನಿಮ್ಮೊಳಗಿನ ಸ್ಪರ್ಧೆ ಅತ್ಯುತ್ತಮ ಕನ್ನಡ ಬಳಕೆಯಲ್ಲಿರಲಿ. ದೂರದರ್ಶನ, ಬಾನುಲಿ ಮತ್ತು ಪತ್ರಿಕೆಗಳಲ್ಲಿ ಅನಗತ್ಯ ಆಂಗ್ಲ ಪದ ಬಳಕೆ ಬೇಡ. ಕೆಟ್ಟ ಪದ, ಪದಪುಂಜಗಳನ್ನು ಬಳಸದೆ ಸಿರಿಗನ್ನಡ ಮತ್ತು ಸರಿಗನ್ನಡ ಬಳಸಿ ಎಂದು ಮನವಿ ಮಾಡಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!