Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕಲಾವಿದರ ಕಷ್ಟಗಳಿಗೆ ಸ್ಪಂದಿಸಬೇಕು

ಕಲಾವಿದರ ಕಷ್ಟಗಳಿಗೆ ಸ್ಪಂದಿಸಬೇಕು

ಮಂಗಳೂರು: ಕೊರೊನಾ ಲಾಕ್ ಡೌನ್ ಅವಧಿಯಲ್ಲಿ ಕಲಾವಿದರ ಕಷ್ಟ ಅರಿತು, ಸ್ಪಂದಿಸಬೇಕಾದ ಅನಿವಾರ್ಯತೆ ಇದೆ ಎಂದು ಮುಂಬೈ ಕಲಾ ಸೌರಭ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಹೇಳಿದರು.

ಹರಿಕಥಾ ಪರಿಷತ್ ಮಂಗಳೂರು ಹಾಗೂ ಕಲಾ ಸೌರಭ ಮುಂಬಯಿ ಸಂಯುಕ್ತಾಶ್ರಯದಲ್ಲಿ ಕದ್ರಿ ಶ್ರೀಕೃಷ್ಣ ಕಲ್ಯಾಣ ಮಂದಿರದಲ್ಲಿ ಈಚೆಗೆ ನಡೆದ ಅಗಲಿದ ಕಲಾವಿದರ ಶ್ರದ್ಧಾಂಜಲಿ ಹಾಗೂ ಆರ್ಥಿಕ ಅಶಕ್ತ ಕಲಾವಿದರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಆಗಮಿಸಿ, ಮಾತನಾಡಿದರು.

ಹರಿಕಥಾ ಪರಿಷತ್ ಗೌರವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.

ಶ್ರೀಕೃಷ್ಣ ಯಕ್ಷಸಭಾದ ಪ್ರಭಾಕರ ರಾವ್, ಸಂಗೀತ ಕಲಾವಿದ ವೆಂಕಟೇಶ್ ಇದ್ದರು.

ಕಲಾ ಸೌರಭದ ಅಭಿಮಾನಿ, ಪೋಷಕರು ಮತ್ತು ದಾನಿಗಳ ಸಹಕಾರದಿಂದ ಸಂತ್ರಸ್ತ ಗಾಯಕರು, ಹಾರ್ಮೋನಿಯಂ, ತಬಲಾ, ಕೊಳಲು, ಸ್ಯಾಕ್ಸ್ಸೊಫೋನ್ ವಾದಕರು, ಕೊಂಬಿನವರು, ಜಾನಪದ ಗಾಯನ ನೃತ್ಯ ಮುಂತಾದ ಕಲಾವಿದರನ್ನು ಗುರುತಿಸಿ ದಿನಸಿ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪದ್ಮನಾಭ ಸಸಿಹಿತ್ಲು ಅವರನ್ನು ಹರಿಕಥಾ ಪರಿಷತ್ ವತಿಯಿಂದ ಗೌರವಿಸಲಾಯಿತು.

ಕಲಾಸೌರಭ ಸ್ಥಾಪಕ ಸದಸ್ಯ ಹಾಗೂ ಹರಿಕಥಾ ಪರಿಷತ್ ಗೌರವ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಖಜಾಂಚಿ ಡಾ| ಎಸ್. ಪಿ. ಗುರುದಾಸ್ ವಂದಿಸಿದರು.

ಈ ಸಂದರ್ಭದಲ್ಲಿ ಈಚೆಗೆ ನಿಧನರಾದ ಸ್ಯಾಕ್ಸೋಫೋನ್ ಕಲಾವಿದ ಡಾ| ಮಚ್ಚೇಂದ್ರನಾಥ ಮಂಗಳಾದೇವಿ ಮತ್ತು ತಬಲಾ ವಾದಕ ಸುರೇಶ್ ಶೆಟ್ಟಿ ಅವರಿಗೆ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಮತ್ತು ಸಂಚಾಲಕ ಸುಧಾಕರ ರಾವ್ ಪೇಜಾವರ ನುಡಿನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!