Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಕಾಂಗ್ರೆಸ್ ನಿಂದ ಕಾಲ್ನಡಿಗೆ ಜಾಥಾ

ಕಾಂಗ್ರೆಸ್ ನಿಂದ ಕಾಲ್ನಡಿಗೆ ಜಾಥಾ

ಸುದ್ದಿಕಿರಣ ವರದಿ
ಶನಿವಾರ, ಆಗಸ್ಟ್ 6

ಕಾಂಗ್ರೆಸ್ ನಿಂದ ಕಾಲ್ನಡಿಗೆ ಜಾಥಾ
ಉಡುಪಿ: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಭಾರತಕ್ಕಾಗಿ ನಡಿಗೆ- ಕಾಲ್ನಡಿಗೆ ಜಾಥಾ ಶನಿವಾರ ಇಲ್ಲಿನ ಕನ್ನರ್ಪಾಡಿ ದೇವಳ ವಠಾರದಿಂದ ಆರಂಭಗೊಂಡು ಇಂದ್ರಾಳಿ ಬಸ್ ನಿಲ್ದಾಣ ಬಳಿ ಸಮಾಪನಗೊಂಡಿತು.

ಸ್ವಾತಂತ್ರ್ಯ ಸಂಗ್ರಾಮದ ವೀರ ಯೋಧರ ತ್ಯಾಗ, ಬಲಿದಾನ, ಶಾಂತಿ, ಸಾಮರಸ್ಯ, ದೇಶ ಪ್ರೇಮದ ಸಂದೇಶ ಸಾರಲಾಯಿತು.

ಜಾಥಾದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಬ್ಲಾಕ್ ಅಧ್ಯಕ್ಷ ರಮೇಶ ಕಾಂಚನ್, ಪಕ್ಷ ಪ್ರಮುಖರಾದ ಎಂ. ಎ. ಗಫೂರ್, ಪ್ರಖ್ಯಾತ್ ಶೆಟ್ಟಿ, ವೆರೊನಿಕಾ ಕರ್ನೇಲಿಯೊ, ದೀಪಕ್ ಕೋಟ್ಯಾನ್, ಶಬೀರ್ ಉಡುಪಿ, ತಾರನಾಥ ಕೋಟ್ಯಾನ್, ಸುಕನ್ಯ ಪೂಜಾರಿ, ಮಾಧವ ಬನ್ನಂಜೆ, ದಿನೇಶ್ ಪುತ್ರನ್, ಉದ್ಯಾವರ ನಾಗೇಶ್ ಕುಮಾರ್, ಲೂಯಿಸ್ ಲೋಬೊ, ಕೀರ್ತಿ ಶೆಟ್ಟಿ, ಭಾಸ್ಕರ ರಾವ್ ಕಿದಿಯೂರು, ದೀಪಕ್ ಕೋಟ್ಯಾನ್, ಅಣ್ಣಯ್ಯ ಶೇರಿಗಾರ್, ದಿನಕರ ಹೇರೂರು, ಗಣೇಶ್ ನೆರ್ಗಿ, ಹರೀಶ್ ಶೆಟ್ಟಿ ಪಾಂಗಳ, ಶಶಿಧರ್ ಶೆಟ್ಟಿ ಎರ್ಮಾಳ್ ಮೊದಲಾದವರಿದ್ದರು.

ಜಾಥಾ ಕಿನ್ನಿಮುಲ್ಕಿ ಮುಖ್ಯದ್ವಾರ ಮೂಲಕ ಸಾಗಿ ಜೋಡುರಸ್ತೆ, ಕೋರ್ಟ್ ರಸ್ತೆ, ಸರ್ವಿಸ್ ಬಸ್ ನಿಲ್ದಾಣ, ಕಿದಿಯೂರು ಹೋಟೆಲ್, ಸಿಟಿ ಬಸ್ ನಿಲ್ದಾಣ, ಕಲ್ಸಂಕ, ಕಡಿಯಾಳಿ, ಎಂಜಿಎಂ ಕಾಲೇಜು ಮುಂಭಾಗದಿಂದ ಇಂದ್ರಾಳಿ ವರೆಗೆ ಸಾಗಿಬಂತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!