Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಕಾನೂನು ಕೈಗೆತ್ತಿಕೊಳ್ಳದಿರಿ: ಖಾಝಿ ಉಸ್ತಾದ್ ಸಲಹೆ

ಕಾನೂನು ಕೈಗೆತ್ತಿಕೊಳ್ಳದಿರಿ: ಖಾಝಿ ಉಸ್ತಾದ್ ಸಲಹೆ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ಕಾನೂನು ಕೈಗೆತ್ತಿಕೊಳ್ಳದಿರಿ: ಖಾಝಿ ಉಸ್ತಾದ್ ಸಲಹೆ
ಉಡುಪಿ: ನೆರೆಯ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಖಂಡನೀಯ ಮತ್ತು ವಿಷಾದನೀಯ.

ಯಾವುದೇ ಕಾರಣಕ್ಕೂ ಶಾಂತಿ ಕದಡದೆ, ಕಾನೂನು ಕೈಗೆತ್ತಿಕೊಳ್ಳದಿರಿ ಎಂದು ಉಡುಪಿ, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಉಸ್ತಾದ್ ಮಾಣಿ ಸಲಹೆ ನೀಡಿದ್ದಾರೆ.

ಕಾನೂನನ್ನು ಗೌರವಿಸಿ ಎಲ್ಲರೂ ಶಾಂತಿ ಸೌಹಾರ್ದ ಕಾಪಾಡಬೇಕೆಂದು ವಿನಂತಿಸುವುದಾಗಿ ಅವರು ತಿಳಿಸಿದ್ದಾರೆ.
ಸರಕಾರ ಮತ್ತು ಗೃಹ ಇಲಾಖೆ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಇದೀಗ ನಡೆದಿರುವ ಅಮಾಯಕರ ಕೊಲೆಗಾರರಿಗೆ ಕಾನೂನು ರೀತಿಯ ಶಿಕ್ಷೆ ನೀಡಬೇಕು.

ಶಾಂತಿ ಕಾಪಾಡುವಂತೆ ಸಂಬಂಧಪಟ್ಟ ನಾಯಕರು ತಮ್ಮ ಮೊಹಲ್ಲಾಗಳಲ್ಲಿ ಶಾಂತಿ ಸಂದೇಶ ನೀಡುವಂತೆ ಅವರು ಸಲಹೆ ನೀಡಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!