ಸುದ್ದಿಕಿರಣ ವರದಿ
ಗುರುವಾರ, ಮಾರ್ಚ್ 24
ಕಾಪು ಮಾರಿಗುಡಿಗೆ ಭೇಟಿ
ಕಾಪು; ದೊಡ್ಡಣಗುಡ್ಡೆ ಶ್ರೀ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಗುರುವಾರ ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ದೇವಿಯ ದರುಶನ ಪಡೆದರು.
ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮತ್ತು ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ ವರು ಗುರೂಜಿಯವರನ್ನು ಆದರದಿಂದ ಬರಮಾಡಿಕೊಂಡರು.
ಕಚೇರಿ ನಿರ್ವಹಣಾ ಸಮಿತಿ ಮುಖ್ಯ ಸಂಚಾಲಕ ಸುನಿಲ್ ಎಸ್ ಪೂಜಾರಿ ಮತ್ತು ದೇವಳದ ಸಿಬ್ಬಂದಿ ಗೋವರ್ಧನ ಸೇರಿಗಾರ್ ಇದ್ದರು.