ಉಡುಪಿ: ಇಂದ್ರಾಣಿ ನದಿ ಹರಿಯುತ್ತಿರುವ ಮಠದಬೆಟ್ಟು ಪರಿಸರದಲ್ಲಿ ಶಾಸಕ ಕೆ. ರಘುಪತಿ ಭಟ್ ಮುತುವರ್ಜಿಯಿಂದ ರಾಜ್ಯ ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರಾದ ಅನುದಾನದಿಂದ
ನಿರ್ಮಿಸಲಾಗುತ್ತಿರುವ ತಡೆಗೋಡೆ ಕಾಮಗಾರಿಯನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಗುರುವಾರ ಪರಿಶೀಲನೆ ನಡೆಸಿದರು.
ನಗರಸಭಾ ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಎಂ. ಅಂಚನ್, ನಗರಸಭಾ ಸದಸ್ಯರಾದ ಸವಿತಾ ಹರೀಶ್ ರಾಮ್ ಬನ್ನಂಜೆ, ಗೀತಾ ಶೇಟ್, ಬಾಲಕೃಷ್ಣ ಶೆಟ್ಟಿ, ರಜನಿ ಹೆಬ್ಬಾರ್, ಮಂಜುನಾಥ್ ಮಣಿಪಾಲ ಮತ್ತು ರುಡಾಲ್ಫ್ ಮೊದಲಾದವರಿದ್ದರು.