Thursday, July 7, 2022
Home ಸಮಾಚಾರ ಕಾರ್ಯಕರ್ತರೇ ಪಕ್ಷದ ಆಸ್ತಿ

ಕಾರ್ಯಕರ್ತರೇ ಪಕ್ಷದ ಆಸ್ತಿ

ಕಾರ್ಯಕರ್ತರೇ ಪಕ್ಷದ ಆಸ್ತಿ
ಬ್ರಹ್ಮಾವರ: ಕಾರ್ಯಕರ್ತರೇ ಪಕ್ಷದ ಆಸ್ತಿ. ಅಂಥ ಕಾರ್ಯಕರ್ತರೇ ಸ್ಪರ್ಧಿಸುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಸಂಘಟನಾತ್ಮಕವಾಗಿ ಎದುರಿಸಿ, ಪಕ್ಷ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದುಬರುವಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವುದಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನ ಸಭೆ ಹಾಗೂ ನೂತನ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ ನೂತನ ಅಧ್ಯಕ್ಷ ದಿನಕರ ಹೇರೂರು ಅವರಿಗೆ ಅಧಿಕಾರ ಹಸ್ತಾಂತರಿಸಿ, ಶುಭ ಹಾರೈಸಿದರು.

ಬೂತ್ ಮಟ್ಟದಲ್ಲಿ ಪಕ್ಷ ಕಾರ್ಯಕರ್ತರು ಸಣ್ಣಪುಟ್ಟ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿ ದುಡಿದು, ಪಕ್ಷ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗಾಗಿ ಸಂಘಟಿತರಾಗಬೇಕು ಎಂದು ಜಿ. ಪಂ. ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ ಕರೆ ನೀಡಿದರು.

ತಾ. ಪಂ. ಮಾಜಿ ಸದಸ್ಯೆ ವೆರೋನಿಕಾ ಕರ್ನೇಲಿಯೊ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕರ್ಜೆ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆಗೊಂಡರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾವಂಜೆ ರಮೇಶ್ ಶೆಟ್ಟಿ, ಕರ್ಜೆ ರಾಘವೇಂದ್ರ ಶೆಟ್ಟಿ, ಸುಲೋಚನಾ ಕೆಮ್ಮಣ್ಣು, ಕೆ. ಪಿ. ಇಬ್ರಾಹಿಂ ಮಟಪಾಡಿ, ರಾಜೇಶ್ ಶೆಟ್ಟಿ ಕುಂಬ್ರಗೋಡು, ಸೂರ್ಯ ಸಾಲಿಯಾನ್, ಬಾಲಚಂದ್ರ ಹಂದಾಡಿ, ಸೌರಭ್ ಬಲ್ಲಾಳ್ ಇದ್ದರು.

ಹಿರಿಯ ಕಾಂಗ್ರೆಸಿಗರಾದ ಸದಾಶಿವ ನಾಯಕ್ ಸ್ವಾಗತಿಸಿ, ರಮೇಶ್ ಕರ್ಕೇರ ಉಪ್ಪೂರು ಹಾಗೂ ಉದಯ ಆಚಾರ್ಯ ಹೇರೂರು ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!