Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಯುರೋಪ್ ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗಿ

ಯುರೋಪ್ ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗಿ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 8

ಯುರೋಪ್ ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗಿ
ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುವರ್ೇದ ಕಾಲೇಜು ಮತ್ತು ಆಸ್ಪತ್ರೆಯ ಎಸ್.ಡಿ.ಎಂ ಫಾರ್ಮಸಿ ಜಿ.ಎಂ. ಡಾ. ಮುರಳೀಧರ ಬಲ್ಲಾಳ್ ಯುರೋಪಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಲು ತೆರಳಿದ್ದಾರೆ.

ಭಾರತದಲ್ಲಿ ಆಯುರ್ವೇದ ಚಿಕಿತ್ಸಾ ಪ್ರಕಾರವಾದ ವಾತಾತಪೀಕ (ದೈನಂದಿನ ಜೀವನದಲ್ಲಿ ರಸಾಯನ ಚಿಕಿತ್ಸೆ) ಬಗ್ಗೆ ಈಚಿನ ಅನ್ವೇಷಣೆ ಮತ್ತು ಪ್ರಗತಿ ಬಗ್ಗೆ ಯುರೋಪಿನ ಕ್ರೋವೆಷಿಯಾ ದೇಶದ ಝಾಗ್ ರೆಬ ನಲ್ಲಿ ಇದೇ ಜುಲೈ 9ರಿಂದ 20ರ ವರೆಗೆ ರಸಾಯನ ಸಂಸ್ಥೆ ಆಯ್ದ ದೇಶಗಳ ವೈದ್ಯರಿಗೆ ಹೃವಾತ್ಸಕ ಅಂತಾರಾಷ್ಟ್ರೀಯ ಕಾರ್ಯಾಗಾರ ಹಮ್ಮಿಕೊಂಡಿದೆ. ಆ ಕ್ಷೇತ್ರದ ವಿಶೇಷ ಆಹ್ವಾನಿತ ಪ್ರಮುಖ ತಜ್ಞರಾಗಿ ಡಾ. ಮುರಳೀಧರ ಬಲ್ಲಾಳ್ ಭಾಗವಹಿಸಿದ್ದಾರೆ.

ವಾತಾತಪೀಕ ರಸಾಯನ ಚಿಕಿತ್ಸೆಯನ್ನು ಕೇಂದ್ರೀಕರಿಸಿ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಎಸ್.ಡಿ.ಎಮ್ ಪಾರ್ಮಸಿ ಉಡುಪಿ ಈಗಾಗಲೇ ಹಲವಾರು ರಸಾಯನ ಚಿಕಿತ್ಸಾ ಔಷಧಿಗಳನ್ನು ತಯಾರಿಸುತ್ತಿದ್ದು, ಅದರ ಚಿಕಿತ್ಸೆ ಮತ್ತು ಪ್ರಾತ್ಯಕ್ಷಿಕೆ ಬಗ್ಗೆ ಡಾ. ಬಲ್ಲಾಳ್ ವಿವರಿಸಲಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!