ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ 4 ಕಾಲು ಸೇತುವೆ ರಚನೆಗೆ 4.36 ಕೋ. ರೂ. ಅನುದಾನ ಮಂಜೂರಾಗಿರುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದ ಬಡಾ ಎರ್ಮಾಳು, ಕುಂದಾಪುರ ವಿಧಾನಸಭಾ ಕ್ಷೇತ್ರದ ಆನೆಗುಡ್ಡೆ, ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ಮಹೇಶ್ ಆಸ್ಪತ್ರೆ ಬಳಿ ಹಾಗೂ ಅಂಬಾಗಿಲಿನಲ್ಲಿ ತಲಾ 1.08 ಕೋ. ರೂ. ವೆಚ್ಚದ ಕಾಲು ಸೇತುವೆ ನಿರ್ಮಾಣವಾಗಲಿದೆ ಎಂದು ಸಂಸದೆ ಶೋಭಾ ತಿಳಿಸಿದ್ದಾರೆ.