ಉಡುಪಿ: ಧರ್ಮಸ್ಥಳ ನಿತ್ಯಾನಂದ ನಗರದಲ್ಲಿರುವ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಹಾಶಿವರಾತ್ರಿ ಪರ್ವಕಾಲದಲ್ಲಿ ಗುರುವಾರ ಹರಿದ್ವಾರದ ಮಹಾ ಕುಂಭಮೇಳದಲ್ಲಿ ಭಾಗವಹಿಸಿದರು.
ಅಲ್ಲಿನ ಜುನಾ ಅಖಾಡದ ನಾಗಾ ಸಾಧುಗಳ ಶೋಭಾಯಾತ್ರೆಯಲ್ಲಿ ಭಾಗವಹಿಸಿದರು. ಪವಿತ್ರ ಗಂಗಾ ಸ್ನಾನ ಮಾಡಿದರು.