Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕೃತಜ್ಞತಾ ಭಾವ ರೂಢಿಸಿಕೊಳ್ಳಲು ಕರೆ

ಕೃತಜ್ಞತಾ ಭಾವ ರೂಢಿಸಿಕೊಳ್ಳಲು ಕರೆ

ಸುದ್ದಿಕಿರಣ ವರದಿ
ಭಾನುವಾರ, ಜೂನ್ 12

ಕೃತಜ್ಞತಾ ಭಾವ ರೂಢಿಸಿಕೊಳ್ಳಲು ಕರೆ
ಉಡುಪಿ: ಕೃತಜ್ಞತಾ ಭಾವ ಬದುಕಿನಲ್ಲಿ ರೂಢಿಸಿಕೊಳ್ಳಲೇಬೇಕಾದ ಮಹತ್ವದ ಗುಣ. ಕಷ್ಟದಲ್ಲಿದ್ದಾಗ ಬೇರೆಯವರು ಸಹಾಯ ಮಾಡಿದ್ದನ್ನು ಮರೆಯದೇ ನಾವು ಉತ್ತಮ ಸ್ಥಿತಿಗೆ ಬಂದಾಗ ಸಮಾಜದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಋಣ ಸಂದಾಯ ಮಾಡಬೇಕು. ಏರಿದ ಏಣಿ, ದಾಟಿದ ದೋಣಿಯನ್ನು ಮರೆಯಬಾರದು ಎಂದು ಇಲ್ಲಿನ ಹಿರಿಯ ಲೆಕ್ಕಪರಿಶೋಧಕ ಗಣೇಶ ಕಾಂಚನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಯಕ್ಷಗಾನ ಕಲಾರಂಗ ಅಂಗಸಂಸ್ಥೆ ವಿದ್ಯಾಪೋಷಕ್ ಫಲಾನುಭವಿ ವಿದ್ಯಾಥರ್ಿಗಳಾದ ಬಾರ್ಕೂರಿನ ಕೋಟೆಕೆರೆ ಶರತ್ ಕುಮಾರ್ (ಸಿ.ಎ ವಿದ್ಯಾರ್ಥಿ) ಮತ್ತು ಜ್ಞಾನೇಶ್ ಕುಮಾರ್ (ಅಂತಿಮ ಇಂಜಿನಿಯರಿಂಗ್) ಅವರಿಗೆ ನಿರ್ಮಿಸಲಾದ ಮನೆಗಳ ಪ್ರಾಯೋಜಕತ್ವ ವಹಿಸಿ, ನೂತನ ಮನೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಫುಲ್ಲಾ ಜಿ. ಕಾಂಚನ್ ಇದ್ದರು.

ಅಭ್ಯಾಗತರಾಗಿದ್ದ ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್, ಯಕ್ಷಗಾನ ಕಲಾರಂಗದ ಸಮಾಜಮುಖೀ ಕಾರ್ಯಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.

ಉದ್ಯಮಿ ಯು. ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ತುಳಸೀದಾಸ್ ಕಾಂಚನ್, ವಸಂತ ಕಾಂಚನ್, ಸಂಸ್ಥೆ ಉಪಾಧ್ಯಕ್ಷರಾದ ಎಸ್. ವಿ. ಭಟ್ ಮತ್ತು ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಮನೋಹರ್ ಕೆ., ಪ್ರೊ. ಕೆ. ಸದಾಶಿವ ರಾವ್ ಹಾಗೂ ಸಂಸ್ಥೆ ಕಾರ್ಯಕರ್ತರು ಇದ್ದರು.

ಸರ್ವರನ್ನೂ ಸ್ವಾಗತಿಸಿದ ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್, ಇದು ಸಂಸ್ಥೆ ದಾನಿಗಳ ನೆರವಿನಿಂದ ನಿರ್ಮಿಸಿಕೊಟ್ಟ 29ನೇ ಮನೆಯಾಗಿದ್ದು, ಈ ತಿಂಗಳಿನಲ್ಲಿ ಇನ್ನೂ 6 ಮನೆಗಳು ಉದ್ಘಾಟನೆಗೊಳ್ಳಲಿವೆ ಎಂದರು.

ಜೊತೆ ಕಾರ್ಯದರ್ಶಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!