ಮಣಿಪಾಲ: ಇಲ್ಲಿನ ಕಸ್ತೂರಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆ ರಕ್ತನಿಧಿ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್.ಬಿ.ಎಚ್) ಮಾನ್ಯತಾ ಪ್ರಮಾಣಪತ್ರ ನೀಡಿದೆ. ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರಿಗಾಗಿ ನೀಡಿದ ಗುಣಮಟ್ಟದ ಸೇವೆಗಾಗಿ ಈ ಪ್ರಮಾಣಪತ್ರ ನೀಡಲಾಗಿದೆ.
ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಆಸ್ಪತ್ರೆ ರಕ್ತನಿಧಿ ನಿರ್ದೇಶಕಿ ಡಾ. ಶಮೀ ಶಾಸ್ತ್ರಿ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿ ಶುಭ ಹಾರೈಸಿದರು.
ಮಾಹೆ ಉಪಕುಲಪತಿ ಕ| ಡಾ. ಎಂ. ಡಿ. ವೆಂಕಟೇಶ್, ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ರಕ್ತ ವರ್ಗಾವಣೆ ಸೇವೆಯ ಪಾತ್ರವನ್ನು ಒತ್ತಿಹೇಳಿದರು.
ಸಹ ಉಪಕುಲಪತಿ (ಆರೋಗ್ಯ ವಿಜ್ಞಾನ) ಡಾ. ಪಿ.ಎಲ್.ಎನ್.ಜಿ ರಾವ್, ಕೆಎಂಸಿ ಡೀನ್ ಡಾ. ಶರತ್ ಕೆ. ರಾವ್, ಆಸ್ಪತ್ರೆ ಕಾರ್ಯನಿರ್ವಹಣಾಧಿಕಾರಿ ಸಿ. ಜಿ. ಮುತ್ತಣ್ಣ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮಾಹೆ ಕುಲಸಚಿವ ಡಾ. ನಾರಾಯಣ ಸಭಾಹಿತ್, ಆಸ್ಪತ್ರೆ ಗುಣಮಟ್ಟ ಅನುಷ್ಠಾನ ಸಲಹೆಗಾರ ಡಾ. ಸುನಿಲ್ ಸಿ. ಮುಂಡ್ಕೂರ್, ರಕ್ತನಿಧಿ ಗುಣಮಟ್ಟ ವ್ಯವಸ್ಥಾಪಕ ಡಾ. ಗಣೇಶ್ ಮೋಹನ್ ಇದ್ದರು.