Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಕೇಸರಿ ಶಲ್ಯ ಧರಿಸುವ ಎಚ್ಚರಿಕೆ

ಕೇಸರಿ ಶಲ್ಯ ಧರಿಸುವ ಎಚ್ಚರಿಕೆ

ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 4, 2022

ಕೇಸರಿ ಶಲ್ಯ ಧರಿಸುವ ಎಚ್ಚರಿಕೆ
ಉಡುಪಿ : ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಲ್ಲಿ ನಾವು ಕೇಸರಿ ಶಲ್ಯ ಧರಿಸುತ್ತೇವೆ.
ಇದು ಬಜರಂಗದಳ ನೀಡಿದ ಎಚ್ಚರಿಕೆ.

ಇಲ್ಲಿನ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿರುವ ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಜರಂಗದಳ ಮುಖ್ಯಸ್ಥ ಸುನಿಲ್ ಕೆ. ಆರ್., ಕಾಲೇಜಿನ ನಿಯಮ ಪಾಲಿಸುವುದು ವಿದ್ಯಾರ್ಥಿನಿಯರ ಕರ್ತವ್ಯ. ಮಾತ್ರವಲ್ಲದೆ ಕಾಲೇಜಿನಲ್ಲಿ ಸಮಾನತೆ ಕಾಪಾಡಿಕೊಳ್ಳುವುದೂ ಎಲ್ಲ ಧರ್ಮೀಯರ ಕರ್ತವ್ಯ.

ಅವರು ಹಿಜಾಬ್ ಧರಿಸಿಯೇ ಬರುವುದಾದರೆ ಹಿಂದೂ ವಿದ್ಯಾರ್ಥಿನಿಯರಿಗೆ ಕೇಸರಿ ಶಾಲು ಧರಿಸಲು ತಿಳಿಸುವುದಾಗಿ ಎಚ್ಚರಿಕೆ ನೀಡಿದರು.

ಕಾಲೇಜಿನ ವಿದ್ಯಾರ್ಥಿನಿಯರು ಈಚೆಗೆ ಹಿಜಾಬ್ ಧರಿಸಿಕೊಂಡು ಬಂದ ಹಿನ್ನೆಲೆಯಲ್ಲಿ 6 ಮಂದಿಯನ್ನು ತರಗತಿಯಿಂದ ಹೊರಗಿಡಲಾಗಿತ್ತು.

ವಿವಾದ ವಿವಿಧ ಆಯಾಮಗಳಲ್ಲಿ ಹೊರಳಾಡುತ್ತಿದ್ದು, ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಬೇಡಿಕೆ ಮುಂದಿಟ್ಟು, ಹಿಜಾಬ್ ಧರಿಸಿ ಬಂದಿದ್ದರು. ಆದರೆ, ಕಾಲೇಜು ಆಡಳಿತ ಅದಕ್ಕೆ ಅವಕಾಶ ನೀಡಿರಲಿಲ್ಲ.

ಉಡುಪಿ ಶಾಸಕ ರಘುಪತಿ ಭಟ್, ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಮತ್ತು ವಿದ್ಯಾರ್ಥಿನಿಯರ ಹೆತ್ತವರು ಸಭೆ ನಡೆಸಿ, ಸಭೆಯ ನಿರ್ಣಯವನ್ನು ಪಿಯು ಬೋರ್ಡ್ ಗೆ ಕಳಿಸಿದ್ದು, ಇಲಾಖೆ ವರದಿಗಾಗಿ‌ ಎದುರು ನೋಡಲಾಗುತ್ತಿದೆ.

ಇಲಾಖೆ ಆದೇಶ ಪಾಲಿಸುವುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ.

ಈಮಧ್ಯೆ, ವಿವಾದ ಸೌಹಾರ್ದಯುತವಾಗಿ ಬಗೆಹರಿಸುವಂತೆ ಕೆಲವು ಇಸ್ಲಾಂ ಸಂಘಟನೆಗಳು ಮನವಿ‌ ಮಾಡಿ, ಜಿಲ್ಲಾಧಿಕಾರಿಯನ್ನೂ ಆಗ್ರಹಿಸಿವೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!