Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಕೈವಾರ ತಾತಯ್ಯ ಜಯಂತಿ

ಕೈವಾರ ತಾತಯ್ಯ ಜಯಂತಿ

ಸುದ್ದಿಕಿರಣ ವರದಿ
ಭಾನುವಾರ, ಮಾರ್ಚ್ 27

ಕೈವಾರ ತಾತಯ್ಯ ಜಯಂತಿ
ಉಡುಪಿ: ಮಹಾಪುರುಷರ ತತ್ವಾದರ್ಶ ಪಾಲನೆ, ಜಯಂತಿ ಆಚರಣೆ ಇತ್ಯಾದಿಗಳಿಂದ ಸಮಾಜದ ಉನ್ನತಿಗೆ ಪ್ರೇರಣೆ ಲಭಿಸುತ್ತದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ. ಎನ್. ಹೇಳಿದರು.

ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಆಚರಣೆಯಲ್ಲಿ ಮಾತನಾಡಿದರು.

ಮಾನವತಾವಾದಿ ಕೈವಾರ ತಾತಯ್ಯ ಬಗ್ಗೆ ಮಾತನಾಡಿದ ಅವರು, ಆದರ್ಶ ಪುರುಷರ ತತ್ವ ಆದರ್ಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡು ಮೌಲ್ಯಾಧಾರಿತ ಜೀವನ ನಡೆಸಬೇಕು ಎಂದರು.

ಜಿಲ್ಲಾಧಿಕಾರಿ ಕಚೇರಿ ಅಧೀಕ್ಷಕ ರವಿಶಂಕರ್ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ ಸ್ವಾಗತಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!