ಉಡುಪಿ: ಇಲ್ಲಿನ ಕಡಿಯಾಳಿ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಬ್ರಹ್ಮಣ್ಯ ನಗರ ವಾರ್ಡಿನ ಕೊರಗ ಸಮುದಾಯದ ನರ್ಸಿ ಎಂಬವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವ ಮೂಲಕ ಸಮಾಜದ ಕಟ್ಟಕಡೆಯ ಹಿಂದುಳಿದ ಜನಾಂಗವಾದ ಕೊರಗರ ಮನೆಯನ್ನು ಬೆಳಗುವ ಮೂಲಕ ದೇವಪ್ರೀತಿಯ ಕಾರ್ಯ ನಡೆಸಲಾಯಿತು.
ಶಾಸಕ ರಘುಪತಿ ಭಟ್ ಅವರ ಹುಟ್ಟುಹಬ್ಬದ ದಿನದಂದೇ ಈ ಕಾರ್ಯ ನಡೆದಿದ್ದು, ಶಾಸಕ ಭಟ್ ಸ್ವಿಚ್ ಒತ್ತುವ ಮೂಲಕ ನರ್ಸಿ ಅವರ ಮನೆ- ಮನ ಬೆಳಗಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಕ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಲ್ವಿನ್ ಡಿ’ಸೋಜ, ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಸ್ಥಳೀಯ ನಗರಸಭಾ ಸದಸ್ಯರಾದ ಜಯಂತಿ ಮತ್ತು ಬಾಲಕೃಷ್ಣ ಶೆಟ್ಟಿ, ನಗರಸಭೆ ನಾಮ ನಿರ್ದೇಶಿತ ಸದಸ್ಯೆ ಸುಬೇದ, ಶಾಸಕರ ಪತ್ನಿ ಶಿಲ್ಪಾ ಆರ್. ಭಟ್, ಪುತ್ರ ರೆಯಾಂಶ್ ಮತ್ತು ಕಂದಾಯ ನಿರೀಕ್ಷಕ ಉಪೇಂದ್ರ ಹಾಗೂ ಪಕ್ಷದ ಕಾರ್ಯಕರ್ತರು ಇದ್ದರು.