Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಸ್ವಾವಲಂಬನ ಶಕ್ತಿ ಕೋವಿಡ್ ಸಾಲ ಯೋಜನೆ

ಸ್ವಾವಲಂಬನ ಶಕ್ತಿ ಕೋವಿಡ್ ಸಾಲ ಯೋಜನೆ

ಉಡುಪಿ: ಕೊರೊನಾ ಸಂದರ್ಭದಲ್ಲಿ ವ್ಯಾವಹಾರಿಕವಾಗಿ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಸಣ್ಣ ಉದ್ದಿಮೆದಾರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಲ್ಲಿನ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕ್ ವತಿಯಿಂದ ಮಹಾಲಕ್ಷ್ಮೀ ಸ್ವಾವಲಂಬನ ಶಕ್ತಿ ಕೋವಿಡ್ ಸಾಲ ಯೋಜನೆ ಆರಂಭಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಯಶಪಾಲ್ ಸುವರ್ಣ ತಿಳಿಸಿದ್ದಾರೆ.

ಸಣ್ಣ ಉದ್ದಿಮದಾರರು, ಸ್ವಉದ್ಯೋಗಿಗಳು, ಮೀನುಗಾರರು, ಕೃಷಿಕರು, ಕ್ಷೌರಿಕರು, ಬೀದಿ ಬದಿ ವ್ಯಾಪಾರಸ್ಥರು, ಗೂಡಂಗಡಿ, ಹೊಟೇಲ್ ಉದ್ಯಮಿಗಳು, ರಿಕ್ಷಾ ಹಾಗೂ ವಾಹನ ಚಾಲಕರಿಗಾಗಿ ಮಹಾಲಕ್ಷ್ಮೀ ಸ್ವಾವಲಂಬನ ಶಕ್ತಿ ಕೋವಿಡ್ ಸಾಲ ಯೋಜನೆ ರೂಪಿಸಿದ್ದು, ಗರಿಷ್ಟ ರೂ. 2 ಲಕ್ಷ ರೂ. ಸಾಲವನ್ನು ವಾರ್ಷಿಕ 8.8 ಶೇ. ಬಡ್ಡಿ ದರದಲ್ಲಿ ಪಡೆಯಬಹುದು.

ಈ ಯೋಜನೆಯಲ್ಲಿ ಗ್ರಾಹಕರು ಪಡೆದ ಸಾಲವನ್ನು ದಿನವಹಿ ಸಂಗ್ರಹಣೆ ಮೂಲಕ ಪಾವತಿಸಬೇಕಾಗಿದ್ದು, ಯೋಜನೆಯ ಮೂಲಕ 10 ಸಾವಿರ ಅರ್ಹ ಗ್ರಾಹಕರಿಗೆ ಸಾಲ ನೀಡಲು ನಿರ್ಧರಿಸಲಾಗಿದೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮಹಾಲಕ್ಷ್ಮೀ ಬ್ಯಾಂಕಿನ ಶಾಖೆಗಳನ್ನು ಸಂಪರ್ಕಿಸುವಂತೆ ಯಶಪಾಲ್ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!