Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ವಹಿಸಿದ ಖಾತೆಯ ಸಮರ್ಥ ನಿರ್ವಹಣೆ: ಸುನಿಲ್ ವಿಶ್ವಾಸ

ವಹಿಸಿದ ಖಾತೆಯ ಸಮರ್ಥ ನಿರ್ವಹಣೆ: ಸುನಿಲ್ ವಿಶ್ವಾಸ

ವಹಿಸಿದ ಖಾತೆಯ ಸಮರ್ಥ ನಿರ್ವಹಣೆ: ಸುನಿಲ್ ಭರವಸೆ

(ಸುದ್ದಿಕಿರಣ ವರದಿ)
ಉಡುಪಿ: ಬಿಜೆಪಿ ನನ್ನ ಮೇಲೆ ಭರವಸೆ ಇಟ್ಟು ಸಚಿವ ಸ್ಥಾನ ನೀಡಿದೆ. ಮುಖ್ಯಮಂತ್ರಿ ಬೊಮ್ಮಾಯಿಯವರು ನನಗೆ ಇಂಧನ ಖಾತೆಯಂಥ ದೊಡ್ಡ ಖಾತೆಯನ್ನು ವಹಿಸಿದ್ದಾರೆ. ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ವಹಿಸಿದ ಖಾತೆಯನ್ನು ಸಮರ್ಥವಾಗಿ ‌ನಿರ್ವಹಿಸುತ್ತೇನೆ.

ಇದು ಇಂಧನ ಖಾತೆ ಸಚಿವ ವಿ. ಸುನಿಲ್ ಕುಮಾರ್ ಖಾತೆ ವಹಿಸಿಕೊಂಡ ಬಳಿಕ ನೀಡಿದ ಮೊದಲ ಪ್ರತಿಕ್ರಿಯೆ.

ಶನಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾ ಖಾತೆಗಳೂ ಮಹತ್ವವಾದವುಗಳೇ ಆಗಿವೆ. ಇಂಧನ ಖಾತೆಯ ನಿರ್ವಹಣೆ ಕಷ್ಟವೇನಿಲ್ಲ. ಈಗಷ್ಟೇ ಖಾತೆ ಹಂಚಿಕೆಯಾಗಿದೆ. ಇಲಾಖೆ ವಿವರ ಪಡೆದುಕೊಳ್ಳುತ್ತೇನೆ. ಡಿ.ಕೆ. ಶಿವಕುಮಾರ್, ಶೋಭಾ ಕರಂದ್ಲಾಜೆ ನಿರ್ವಹಿಸಿದ ಖಾತೆ ಇದು. ಸಮರ್ಥವಾಗಿ‌ ನಿರ್ವಹಿಸುವ ವಿಶ್ವಾಸವಿದೆ ಎಂದರು.

ಪವರ್ ಮಿನಿಸ್ಟರ್ ತಾವಾಗ್ತೀರಾ ಎಂಬ ಪ್ರಶ್ನೆಗೆ ಎರಡು ವರ್ಷದ ಬಳಿಕ ಉತ್ತರ ಲಭಿಸುತ್ತದೆ ಎಂದು ನಗೆಯೊಂದಿಗೆ ಉತ್ತರಿಸಿದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಹೊಣೆಗಾರಿಕೆಯನ್ನೂ ತನಗೆ ವಹಿಸಿಕೊಡಲಾಗಿದ್ದು, ಆ ಹೊಣೆಗಾರಿಕೆಯನ್ನೂ ನಿಭಾಯಿಸುವುದಾಗಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.

ಮೋದಿ ಮಾದರಿ ಆಡಳಿತ

ರಾಜ್ಯದಲ್ಲಿ ಭ್ರಷ್ಟಾಚಾರ‌ ಮುಕ್ತ ಆಡಳಿತ ಬೇಕು ಎಂಬುದು ಜನತೆಯ ನಿರೀಕ್ಷೆ. ಅದಕ್ಕಾಗಿ ಪ್ರಾಮಾಣಿಕ ಯತ್ನ ಮಾಡಲಾಗುತ್ತದೆ.

ರಾಜ್ಯದಲ್ಲೂ ಮೋದಿ ಮಾದರಿಯ ಆಡಳಿತ ಜಾರಿಗೆ ಯತ್ನಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!