Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಸಿದ್ಧರಾಮೋತ್ಸವದಲ್ಲಿ ಗಮನ ಸೆಳೆದ `ಉಡುಪಿ ಹುಲಿ'

ಸಿದ್ಧರಾಮೋತ್ಸವದಲ್ಲಿ ಗಮನ ಸೆಳೆದ `ಉಡುಪಿ ಹುಲಿ’

ಸುದ್ದಿಕಿರಣ ವರದಿ
ಗುರುವಾರ, ಆಗಸ್ಟ್ 4

ಸಿದ್ಧರಾಮೋತ್ಸವದಲ್ಲಿ ಗಮನ ಸೆಳೆದ ಉಡುಪಿ ಹುಲಿ
ಉಡುಪಿ: ದಾವಣಗೆರೆಯಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ 75ನೇ ಹುಟ್ಟುಹಬ್ಬ ಆಚರಣೆ ಸಿದ್ಧರಾಮೋತ್ಸವದಲ್ಲಿ ಉಡುಪಿ ಹುಲಿ ನೆರೆದವರ ಗಮನ ಸೆಳೆಯಿತು.

ಇಲ್ಲಿನ ಕಾಂಗ್ರೆಸ್ ಮುಖಂಡ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ ನೇತೃತ್ವದಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬದ ಅಮೃತ ಮಹೋತ್ಸವ ಸಂದರ್ಭದ ಮೆರವಣಿಗೆಯಲ್ಲಿ ಸುಮಾರು 10 ಕಿ.ಮೀ. ದೂರದ ದಾರಿಯುದ್ದಕ್ಕೂ ಹುಲಿವೇಷ ತಂಡ ಹೆಜ್ಜೆ ಹಾಕಿ, ನೆರೆದವರ ಗಮನ ಸೆಳೆಯಿತು.

ಮೆರವಣಿಗೆ ಸಾಗುವಾಗ `ಹೌದು ಹುಲಿಯಾ’ ಎಂಬ ಮೇರುಧ್ವನಿ ಎಲ್ಲರ ಬಾಯಿಮಾತಾಯಿತು. ಹುಲಿವೇಷದ ಹೆಜ್ಜೆಗೆ ಸಿದ್ಧು ಅಭಿಮಾನಿಗಳೂ ಹೆಜ್ಜೆಹಾಕಿದರು.

ಹುಲಿವೇಷಧಾರಿಗಳು ತಮ್ಮ ಹೊಟ್ಟೆ ಭಾಗದಲ್ಲಿ ಸಿದ್ಧರಾಮಯ್ಯ ಅವರ ಭಾವಚಿತ್ರ ಮೂಡಿಸಿಕೊಂಡು ಅಭಿಮಾನ ಮೆರೆದರು.

ಕಲಾವಿದನ ಕೈಚಳಕದಲ್ಲಿ ನವಿರಾಗಿ ಮೂಡಿಬಂದ ಸಿದ್ಧರಾಮಯ್ಯ ಚಿತ್ರ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.

ಕಾಂಗ್ರೆಸ್ ಮುಖಂಡರಾದ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಚರಣ್ ಬಂಗೇರ, ಸೌರಭ್ ಬಳ್ಳಾಲ್, ಸಂದೇಶ್ ಶೆಟ್ಟಿ, ಗುರುಪ್ರಸಾದ್, ಮಹೇಶ್ ಸುವರ್ಣ ಮಲ್ಪೆ, ಕಾಂಗ್ರೆಸ್ ಹಿರಿಯ ಮುಖಂಡ ಜಯ ಶೆಟ್ಟಿ ಬನ್ನಂಜೆ, ಗಣೇಶ್ ರಾಜ್ ಸರಳೇಬೆಟ್ಟು, ರಾಜೇಶ್ ಪ್ರಭು ಪರ್ಕಳ, ದಿವಾಕರ ಪೂಜಾರಿ ಕಡೆಕಾರು, ಪ್ರವೀಣ್ ಕುಂಜಿಬೆಟ್ಟು, ಹರೀಶ್ ಅಮೀನ್ ಮೊದಲಾದರಿದ್ದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!