Friday, January 28, 2022
Home ಸಮಾಚಾರ ರಾಜ್ಯ ವಾರ್ತೆ ಗಾಯಾಳುಗಳನ್ನು ಭೇಟಿ ಮಾಡಿದ ಗೃಹಸಚಿವ

ಗಾಯಾಳುಗಳನ್ನು ಭೇಟಿ ಮಾಡಿದ ಗೃಹಸಚಿವ

ಗಾಯಾಳುಗಳನ್ನು ಭೇಟಿ ಮಾಡಿದ ಗೃಹಸಚಿವ

ಉಡುಪಿ, ಡಿ. 1 (ಸುದ್ದಿಕಿರಣ ವರದಿ): ತೀರ್ಥಹಳ್ಳಿ ತಾಲೂಕಿನ ಬಿಜ್ಜವಳ್ಳಿ ಬಳಿ ಅಕ್ರಮವಾಗಿ ಜಾನುವಾರು ಸಾಗಾಟ ತಡೆಯಲು ಯತ್ನಿಸಿದ ಸಹೋದರರ ಮೇಲೆ ಜಾನುವಾರು ಕಳ್ಳರು ವಾಹನ ಚಲಾಯಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗೃಹಸಚಿವ ಆರಗ ಜ್ಞಾನೇಂದ್ರ ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಗಂಭೀರ ಗಾಯಗೊಂಡಿದ್ದ ಇಬ್ಬರ ಆರೋಗ್ಯ ವಿಚಾರಿಸಿದ ಗೃಹಸಚಿವರು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಕೆಎಂಸಿ ಆಸ್ಪತ್ರೆ ವೈದ್ಯರಿಗೆ ಸೂಚಿಸಿದರು.

ಗಾಯಾಳುಗಳಾದ ಶಿವಮೊಗ್ಗ ಸಮೀಪದ ಕಿತ್ತನಗದ್ದೆ ಗ್ರಾಮದ ಚರಣ್ (24) ಮತ್ತು ಕಿರಣ್ (23) ಗೋವುಗಳ ಸಾಗಾಟ ವಿಷಯ ತಿಳಿದು ಬುಲೆಟ್ ಬೈಕ್ನಲ್ಲಿ ಬೆನ್ನಟ್ಟಿದ್ದು, ವಿಷಯ ತಿಳಿದ ಜಾನುವಾರು ಕಳ್ಳರು ಬಿಜ್ಜವಳ್ಳಿ ಸಮೀಪ ಬೈಕ್ ಸವಾರರ ಮೇಲೆ ವಾಹನ ಚಲಾಯಿಸಿ ಪರಾರಿಯಾಗಿದ್ದರು.

ತಕ್ಷಣ ಎಚ್ಚೆತ್ತುಕೊಂಡ ಸಾರ್ವಜನಿಕರು ಘಟನಾ ಸ್ಥಳದಿಂದ ಪರಾರಿಯಾಗುತ್ತಿದ್ದ ಶಿವಮೊಗ್ಗದ ನವೀದ್ (27) ಎಂಬಾತನನ್ನು ಹಿಡಿದು ಮಾಳೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೊಬ್ಬ ಆರೋಪಿ ತಪ್ಪಿಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಗೋವುಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನ ಮಾಳೂರು ಠಾಣೆ ವಶದಲ್ಲಿದ್ದು, ಪ್ರಕರಣ ದಾಖಲಾಗಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!