Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಗುರ್ಜಿ ಮುಹೂರ್ತ

ಗುರ್ಜಿ ಮುಹೂರ್ತ

ಗುರ್ಜಿ ಮುಹೂರ್ತ

(ಸುದ್ದಿಕಿರಣ ವರದಿ)
ಉಡುಪಿ: ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ತಮ್ಮ ಪ್ರಥಮ ಪರ್ಯಾಯದ ದ್ವಿತೀಯ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ- ವಿಟ್ಲಪಿಂಡಿ ಮಹೋತ್ಸವ ಈ ತಿಂಗಳ 30 ಮತ್ತು 31ರಂದು ಇಲ್ಲಿನ ಶ್ರೀಕೃಷ್ಣಮಠದಲ್ಲಿ ನಡೆಯಲಿದೆ.

ಕೊವಿಡ್ ಹಿನ್ನೆಲೆಯಲ್ಲಿ ಸರಕಾರದ ಸೂಚನೆಯಂತೆ ಈ ಬಾರಿಯೂ ಸರಳವಾಗಿ ಆಚರಿಸಲಾಗುವುದು.

ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯಲಿರುವ ಶ್ರೀಕೃಷ್ಣ ಲೀಲೋತ್ಸವದ ಮೊಸರು ಕುಡಿಕೆ ಸಲುವಾಗಿ ರಥಬೀದಿಯಲ್ಲಿ ಈಚೆಗೆ ಮುಹೂರ್ತ ನಡೆಯಿತು.

ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕ ಗೋವಿಂದರಾಜ್, ಶ್ರೀಕೃಷ್ಣ ಸೇವಾ ಬಳಗದ ವೈ. ಎನ್. ರಾಮಚಂದ್ರ ರಾವ್ ಮತ್ತು ಪ್ರದೀಪ್ ರಾವ್, ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!