Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಗೋಶಾಲೆಗೆ ಕೇಂದ್ರ ಯೋಜನೆ ಸ್ವಾಗತಾರ್ಹ

ಗೋಶಾಲೆಗೆ ಕೇಂದ್ರ ಯೋಜನೆ ಸ್ವಾಗತಾರ್ಹ

ಉಡುಪಿ, ನ. 11

ದೇಶದಾದ್ಯಂತ ಗೋ ರಕ್ಷಣೆ ಕಾರ್ಯದಲ್ಲಿ ನಿರತವಾಗಿರುವ ನೋಂದಾಯಿತ ಗೋಶಾಲೆಗಳ ನೆರವಿಗೆ 900 ಕೋ.ಗಳ ಯೋಜನೆ ರೂಪಿಸಿರುವ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹ ಎಂದು ಗೋ ದತ್ತು ಸ್ವೀಕರಿಸುವ ಮೂಲಕ ಗೋ ಸಂರಕ್ಷಣೆಯ ಪ್ರೇರಕರಾಗಿರುವ ಯಶಪಾಲ್ ಎ. ಸುವರ್ಣ ತಿಳಿಸಿದ್ದಾರೆ.

 

ಕೊರೊನಾ ಸಂಕಷ್ಟದಿಂದ ತೀರಾ ವೆಚ್ಚದಾಯಕವಾದ ಗೋಶಾಲೆಗಳ ನಿರ್ವಹಣೆ ಸಮಸ್ಯೆ ಎದುರಿಸುತ್ತಿದೆ. ಆ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕನಿಷ್ಟ 200 ಕೋ. ರೂ. ಪರಿಹಾರನಿಧಿ ನೀಡುವಂತೆ ಕೇಂದ್ರ ಸರಕಾರಕ್ಕೆ ಕಳೆದ ಆಗಸ್ಟ್ ನಲ್ಲಿ ಮನವಿ ಮಾಡಿದ್ದರು. ಅವರ ಮನವಿಯನ್ನು ಕೇಂದ್ರ ಸರಕಾರ ಪುರಸ್ಕರಿಸಿ ಗೋರಕ್ಷಣೆ ಬಗ್ಗೆ ಬದ್ಧತೆ ಪ್ರದರ್ಶಿಸಿದೆ ಎಂದು ಯಶಪಾಲ್ ತಿಳಿಸಿದ್ದಾರೆ.

ಮಹತ್ವದ ಯೋಜನೆ ರೂಪಿಸಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಿತ್ತ ಸಚಿವೆ ನಿರ್ಮಾಲಾ ಸೀತಾರಾಮನ್ ಅವರನ್ನು ಅಭಿನಂದಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!