Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರಮೋದ್ ಗೋಶಾಲೆಗೆ `ಲಕ್ಷ್ಮೀ' ಆಗಮನ

ಪ್ರಮೋದ್ ಗೋಶಾಲೆಗೆ `ಲಕ್ಷ್ಮೀ’ ಆಗಮನ

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಗೋ ಸಾಕಣೆ ಎಂಬುದು ಆಸಕ್ತಿಯ ವಿಷಯಗಳಲ್ಲೊಂದು. ತನ್ನ ಮನೆಯ ಆವರಣದಲ್ಲಿಯೇ ಸುಸಜ್ಜಿತ ಗೋಶಾಲೆ ನಿರ್ಮಾಣ ಮಾಡಿ, ಅನೇಕ ಗೋವುಗಳನ್ನು ಸಾಕುತ್ತಿರುವ ಅವರು, ತನ್ನ ಬಿಡುವಿಲ್ಲದ ದಿನಚರಿಯ ನಡುವೆಯೂ ಅನೂಚಾನವಾಗಿ ಗೋಸೇವೆ ಮಾಡಿಕೊಂಡು ಬಂದಿದ್ದಾರೆ.

ಅಂಥ ಗೋಶಾಲೆಯಲ್ಲಿ ಆಷಾಢ ಮಾಸದ ಸಪ್ತಮೀ ತಿಥಿ ಶುಕ್ರವಾರದಂದು ಸುಘಟನೆ ನಡೆದಿದೆ. ಗೋಶಾಲೆಯ ದನವೊಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಅದರಿಂದ ಆನಂದತುಂದಿಲರಾದ `ಗೋಪಾಲಕ’ ಪ್ರಮೋದ್ ಮಧ್ವರಾಜ್ ಲಕ್ಷ್ಮೀ ಎಂಬ ಹೆಸರಿಟ್ಟು, ಲಕ್ಷ್ಮೀ ಆಗಮನದಿಂದ ತನ್ನ ಗೋಶಾಲೆಯ ಮೆರುಗು ಹೆಚ್ಚಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಚಾರ ಹಂಚಿಕೊಂಡು ಸಂತಸಪಟ್ಟಿದ್ದಾರೆ.

ಅಂದಹಾಗೆ, ಪ್ರಮೋದ್ ಅವರಿಗೆ ಗೋ ಸಾಕಣೆ ಬಲು ಪ್ರೀತಿಯ ಹವ್ಯಾಸ. ಸಚಿವನಾಗಿದ್ದ ಸಂದರ್ಭದಲ್ಲಿ ರಾಸುಗಳ ಕಾಲು ಬಾಯಿ ರೋಗ ಔಷಧ ವಿತರಣೆ ಕಾರ್ಯಕ್ರಮಕ್ಕೆ ತನ್ನ ಗೋಶಾಲೆಯಿಂದಲೇ ಚಾಲನೆ ನೀಡಿದ್ದರು.

ದೀಪಾವಳಿ ಸಂದರ್ಭದಲ್ಲಂತೂ ಗೋಶಾಲೆಯಲ್ಲಿ ಅಕ್ಷರಶಃ ಹಬ್ಬದ ವಾತಾವರಣ. ಅಂದು ಗೋವುಗಳಿಗೆ ವಿಶೇಷ ಅಲಂಕಾರದ ಜೊತೆಗೆ ಬಗೆ ಬಗೆಯ ಖಾದ್ಯ. ಅಷ್ಟು ಮಾತ್ರವಲ್ಲದೇ ಸ್ವತಃ ಪ್ರಮೋದ್ ಮಧ್ವರಾಜ್ ಅವರೇ ಗೋವುಗಳಿಗೆ ಆರತಿ ಬೆಳಗಿ ಪೂಜೆ ಸಲ್ಲಿಸುತ್ತಾರೆ.

ಗೋ ರಕ್ಷಣೆ, ಗೋಶಾಲೆ ನಡೆಸಿ ಗೋಸೇವೆ ಮಾಡುತ್ತಿರುವ ಪ್ರಮೋದ್ ಮಧ್ವರಾಜ್ , ಆ ಮೂಲಕ ಆಮೋದ ಅನುಭವಿಸುತ್ತಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!