Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಹೆಗ್ಗಡೆ ನಾಮ ನಿರ್ದೇಶನದಿಂದ `ಚಿಂತಕರ ಚಾವಡಿ'ಗೆ ಮೆರುಗು

ಹೆಗ್ಗಡೆ ನಾಮ ನಿರ್ದೇಶನದಿಂದ `ಚಿಂತಕರ ಚಾವಡಿ’ಗೆ ಮೆರುಗು

ಸುದ್ದಿಕಿರಣ ವರದಿ
ಭಾನುವಾರ, ಜುಲೈ 10

ಹೆಗ್ಗಡೆ ನಾಮ ನಿರ್ದೇಶನದಿಂದ ಚಿಂತಕರ ಚಾವಡಿಗೆ ಮೆರುಗು
ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವ ಮೂಲಕ `ಚಿಂತಕರ ಚಾವಡಿ’ ಎಂದು ಕರೆಯಲ್ಪಡುವ ರಾಜ್ಯಸಭೆಯ ಘನತೆಗೆ ಮೆರುಗು ಬಂದಿದೆ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಬಣ್ಣಿಸಿದ್ದಾರೆ.

ಅನ್ನ, ಅಭಯ, ವಿದ್ಯೆ, ಶಿಕ್ಷಣದ ಮೂಲಕ ಚತುರ್ದಾನ ಪರಂಪರೆಯ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಧರ್ಮ ಜಾಗೃತಿ, ಆರೋಗ್ಯ, ಸ್ತ್ರೀ ಶಕ್ತಿ ಸಂಘಟನೆ ಮೂಲಕ ಮಹಿಳಾ ಸಶಕ್ತೀಕರಣ, ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಜನರ ಆರ್ಥಿಕತೆ ವೃದ್ಧಿ, ಮದ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಜನಜಾಗೃತಿ, ವರದಕ್ಷಿಣೆ ಪಿಡುಗು ನಿಯಂತ್ರಿಸಿ ಸರಳ ವಿವಾಹ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ದಶಕಗಳಿಂದ ನಿರಂತರ ಸಾಮೂಹಿಕ ವಿವಾಹ ಆಯೋಜನೆ ಇತ್ಯಾದಿ ಹಲವು ಕ್ಷೇತ್ರದಲ್ಲಿ ಸಮಾಜಸೇವೆ ಮೂಲಕ ಸಾಮಾಜಿಕ ಬದಲಾವಣೆಗೆ ನಾಂದಿ ಹಾಡಿದ ಡಾ| ಹೆಗ್ಗಡೆಯವರ ಚಿಂತನೆ ರಾಜ್ಯ ಸಭೆಯ ಸಂಸದರಾಗಿ ದೇಶದಾದ್ಯಂತ ಕಾರ್ಯರೂಪಗೊಳ್ಳಲು ಸಹಕಾರಿಯಾಗಲಿದೆ ಎಂದು ಯಶಪಾಲ್ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!