ಚಿನ್ನದ ಗಣಪತಿ ಸಮರ್ಪಣೆ
(ಸುದ್ದಿಕಿರಣ ವರದಿ)
ಉಡುಪಿ: ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಭಕ್ತರು ಮತ್ತು ಸಮಿತಿ ವತಿಯಿಂದ ನಿರ್ಮಿಸಲಾದ 10 ಲಕ್ಷ ರೂ. ಮೊತ್ತದ ಬಂಗಾರದ ಮೂರ್ತಿಯನ್ನು ಸಮರ್ಪಿಸಲಾಯಿತು.
ಬಂಗಾರದ ಗಣೇಶ ದೇವರ ವಿಗ್ರಹವನ್ನು ಹೆರ್ಗ ನಾಗರಾಜ ಶರ್ಮ ರಚಿಸಿದ್ದಾರೆ.
ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರತಿವರ್ಷ ಗಣೇಶೋತ್ಸವದ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ ಜೊತೆಗೆ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನೂ ಹಲವು ವರ್ಷದಿಂದ ನಡೆಸಿಕೊಂಡು ಬರುತ್ತಿದೆ.
ಶುಕ್ರವಾರ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ ಜೊತೆಗೆ ಬಂಗಾರದ ಗಣಪತಿ ಪ್ರತಿಷ್ಠಾಪನೆ, ಪೂಜೆ ಜರಗಿತು.
ಸೆ. 13 ಭಾನುವಾರದಂದು ಗಣಹೋಮ, ರಂಗಪೂಜೆ ನಡೆದು ಸಾರ್ವಜನಿಕ ಗಣೇಶ ವಿಗ್ರಹವನ್ನು ಸಾಯಂಕಾಲ 3 ಗಂಟೆಗೆ ಅಲೆವೂರು ನೈಲಪಾದೆ ನದಿಯಲ್ಲಿ ವಿಸರ್ಜಿಸಲಾಗುವುದು