Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಪುತ್ತಿಗೆ ಮಠದ ಚಿನ್ನದ ಗಿಂಡಿ ಕಳವು

ಪುತ್ತಿಗೆ ಮಠದ ಚಿನ್ನದ ಗಿಂಡಿ ಕಳವು

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ಪುತ್ತಿಗೆ ಮಠದ ಚಿನ್ನದ ಗಿಂಡಿ ಕಳವು
ಉಡುಪಿ: ಇಲ್ಲಿನ ಪುತ್ತಿಗೆ ಮಠದಿಂದ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನದ ಗಿಂಡಿ ಕಳವಾಗಿದೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ಜುಲೈ 26ರಂದು ಬೆಳಿಗ್ಗೆ ಮಠದಲ್ಲಿ ಪೂಜೆ ಸಂದರ್ಭ 6 ಮಂದಿ ಮಠದ ವಿದ್ಯಾರ್ಥಿಗಳು ಮತ್ತು ಪುರೋಹಿತರು ಬಂದು ಹೋಗಿದ್ದು, ಪೂಜೆ ನಂತರ ಪೂಜಾ ಸಾಮಾಗ್ರಿಗಳನ್ನು ತೆಗೆದಿಡುವಾಗ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿರುವುದು ಗಮನಕ್ಕೆ ಬಂತು. ಕಳವಾದ ಗಿಂಡಿಯ ಮೌಲ್ಯ ಸುಮಾರು 7 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮಠದ ವ್ಯವಸ್ಥಾಪಕ ವಿಷ್ಣುಮೂರ್ತಿ ಪೊಲೀಸರಿಗೆ ದೂರು ನೀಡಿದ್ದು, ಉಡುಪಿ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!