Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಜನದನಿ ಸಿರಿ ಪ್ರಶಸ್ತಿ ಪುರಸ್ಕೃತ ಜಯನ್ ಗೆ ಅಭಿನಂದನೆ

ಜನದನಿ ಸಿರಿ ಪ್ರಶಸ್ತಿ ಪುರಸ್ಕೃತ ಜಯನ್ ಗೆ ಅಭಿನಂದನೆ

ಉಡುಪಿ: ದಲಿತ ಸಮುದಾಯದ ಧ್ವನಿ, ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅವರಿಗೆ ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘ ಜನದನಿ ಸಿರಿ ಪ್ರಶಸ್ತಿ ನೀಡಿ ಗೌರವಿಸಿದ ಹಿನ್ನೆಲೆಯಲ್ಲಿ ಅವರನ್ನು ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಘಟಕ ಅಭಿನಂದಿಸಿತು.
ಆದಿವುಡುಪಿ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹಿರಿಯ ದಲಿತ ಮುಖಂಡ ಲೋಕೇಶ್ ಪಡುಬಿದ್ರಿ, ದಲಿತ ಸಮಾಜದ ಒಡನಾಡಿಯಾಗಿ ಜಯನ್ ಮಾಡಿದ ಕಾರ್ಯ ಅಪಾರ. ಬದುಕಿನ ನಾನಾ ಮುಖಗಳ ದುರಂತಗಳ ಆಳ ಪರಿಚಯವಿದ್ದ ಅವರ ಸರಳ ನಡೆನುಡಿ ಮತ್ತು ದಲಿತ ಸಮಾಜದ ಬಗೆಗಿನ ಕಾಳಜಿ ಮಾದರಿ ಎಂದರು.
ಅಂಬೇಡ್ಕರ್ ಯುವಸೇನೆ ಮಾರ್ಗದರ್ಶಿ ರಮೇಶ್ ಪಾಲ್, ಜಯನ್ ಮಲ್ಪೆ ರಾಜ್ಯ ಮಟ್ಟದ ಧೀಮಂತ ನಾಯಕ. ಅವರು ಹೋರಾಟದಲ್ಲಿ ತೋರಿದ ಧೈರ್ಯ, ಸಾಹಸ ಪರಿಶಿಷ್ಟ ಜಾತಿಗೆ ಮಾತ್ರವಲ್ಲ ಸಮಸ್ತ ನೊಂದ ಜನಾಂಗಕ್ಕೆ ಮಾರ್ಗದರ್ಶಿ ಎಂದರು.
ದಲಿತ ನಾಯಕ ಗಣೇಶ್ ನೆರ್ಗಿ, ಜಯನ್ ತಮ್ಮ ಪ್ರಖರ ವೈಚಾರಿಕತೆ, ಆಧುನಿಕ ದೃಷ್ಟಿಕೋನಗಳಿಂದ ಬಂಡಾಯ ಮನೋಭಾವ ಉಳಿಸಿಕೊಂಡವರು. ದಲಿತರು ಸ್ವಾಭಿಮಾನಿಗಳಾಗಬೇಕು, ಸ್ವಾವಲಂಬಿಗಳಾಗಬೇಕು, ಶಿಕ್ಷಣ, ಸಂಘಟನೆ, ಹೋರಾಟ ಇತ್ಯಾದಿಗಳನ್ನು ಮೈಗೂಡಿಸಿಕೊಳ್ಳಬೇಕು. ತಮ್ಮ ಹಕ್ಕು ರಕ್ಷಿಸಿಕೊಳ್ಳಲು ಸರ್ವ ತ್ಯಾಗಕ್ಕೂ ಸಿದ್ಧರಿರುವಂತೆ ದಲಿತ ಸಂಘಟನೆಯನ್ನು ಕಟ್ಟಿ ಬೆಳೆಸಿದವರು ಎಂದರು.
ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಮುಖಂಡರಾದ ಕೃಷ್ಣ ಶ್ರೀಯಾನ್, ಮಂಜುನಾಥ ಕಪ್ಪೆಟ್ಟು, ಸುರೇಂದ್ರ ಅಂಜಾರು, ಮಂಜುನಾಥ ಅಮ್ಮುಂಜೆ, ಸಂತೋಷ ಕಪ್ಪೆಟ್ಟು, ಗುಣವಂತ ತೊಟ್ಟಂ, ಶಶಿಕಲಾ ತೊಟ್ಟಂ, ವಸಂತಿ ನೆರ್ಗಿ, ಸತೀಶ್ ತೊಟ್ಟಂ, ಸುಮಿತ್ ನೆರ್ಗಿ, ಚಂದ್ರನಾಥ ಮುಂತಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!