ಉಡುಪಿ: ಸ್ಥಳೀಯ ಶಾಸಕ ರಘುಪತಿ ಭಟ್ ಕಚೇರಿ ಎದುರು ಮಂಗಳವಾರ ಜನಾಗ್ರಹ ಆಂದೋಲನ ನಡೆಸಲಾಗಿದ್ದು, ಸರ್ಕಾರದ ಜನವಿರೋಧಿ ನೀತಿ ಮತ್ತು ಕೊರೊನಾ ಸಂಕಷ್ಟ ಕಾಲದಲ್ಲಿ ಪೀಡಿತರು ಮತ್ತು ಆರ್ಥಿಕ ಸಂಕಷ್ಟಕ್ಕೊಳಗಾದ ಜನಸಾಮಾನ್ಯರನ್ನು ಮರೆತು, ಸರಕಾರ ತನ್ನ ಒಳಜಗಳದಲ್ಲಿ ಮಗ್ನವಾಗಿದೆ ಎಂದು ಆರೋಪಿಸಲಾಯಿತು. ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಲಾಕ್ ಡೌನ್ ನೆಪದಲ್ಲಿ ಜನರ ಹಸಿವಿನ ಬಗ್ಗೆ ಗಮನಕೊಡದೇ, ಯಾವುದಕ್ಕೂ ಸಾಲದ ಪರಿಹಾರ ಪ್ಯಾಕೇಜ್ ಮೂಲಕ ಜನರನ್ನು ವಂಚಿಸಿದೆ. ಅಂಗಡಿ ಮುಂಗಟ್ಟುಗಳ ಬೀದಿಬದಿ ವ್ಯಾಪಾರಿಗಳ ಕಣ್ಣೀರಿಗೆ ಅವರ ಕಷ್ಟಕ್ಕೆ ಸ್ವಲ್ಪವೂ ಸ್ಪಂದಿಸದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಜನಾಗ್ರಹ ಆಂದೋಲನದಲ್ಲಿ ಕಾಂಗ್ರೆಸ್, ವೆಲ್ಫೇರ್ ಪಾರ್ಟಿ, ಎಸ್ಡಿಪಿಐ ಮತ್ತು ಜೆಡಿಎಸ್, ಸಾಮಾಜಿಕ ಸಂಘಟನೆಗಳಾದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ, ಜೆಐಎಚ್, ಸಹಬಾಳ್ವೆ, ಪಿಎಫ್.ಐ, ದಲಿತ ಸಂಘರ್ಷ ಸಮಿತಿ ಮೊದಲಾದ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದರು.
ಅಮೃತ್ ಶೆಣೈ, ವೆರೋನಿಕಾ ಕರ್ನೇಲಿಯೊ, ಸುಂದರ ಮಾಸ್ತರ್, ಯೋಗೀಶ್ ಶೆಟ್ಟಿ, ಅಬ್ದುಲ್ ಅಝೀಜ್ ಉದ್ಯಾವರ ಮೊದಲಾದವರು ಸರಕಾರ ಮತ್ತು ಉಡುಪಿ ಶಾಸಕರ ಧೋರಣೆ ಖಂಡಿಸಿ ಮಾತನಾಡಿದರು.
ಹುಸೇನ್ ಕೋಡಿಬೆಂಗ್ರೆ, ಜನಾರ್ದನ ಭಂಡಾರ್ಕಾರ್, ನಿಸಾರ್ ಉಡುಪಿ, ನಮುನೀರ್ ಕಲ್ಮಾಡಿ, ಇಲ್ಯಾಸ್ ಸಾಸ್ತಾನ, ಕೀರ್ತಿ ಶೆಟ್ಟಿ, ಶಾಹಿದ್ ಅಲಿ, ರಮೇಶ್ ಕಾಂಚನ್, ಜ್ಯೋತಿ ಶೆಟ್ಟಿ, ಜ್ಯೋತಿ ಹೆಬ್ಬಾರ್, ಅರ್ಬಝ್, ಸಾಲಿಡಾರಿಟಿಯ ಝಕ್ರಿಯಾ, ಯಾಸೀನ್ ಮಲ್ಪೆ ಮೊದಲಾದವರಿದ್ದರು