ಮಲ್ಪೆ: ಜನಾಗ್ರಹ ಆಂದೋಲನ ವತಿಯಿಂದ ನಾವೂ ಬದುಕಬೇಕು ಘೋಷವಾಕ್ಯದಡಿ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಜನಾಗ್ರಹ ಚಳುವಳಿ ಅಂಗವಾಗಿ ಮಲ್ಪೆ ನಾಗರಿಕರು ಸರ್ಕಾರದ ವೈಫಲ್ಯದ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಮುಖ ಬೇಡಿಕೆಯಾದ ಕೊರೊನಾ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಹಾಗೂ ಸರ್ವರಿಗೂ ತ್ವರಿತ ಗತಿಯಲ್ಲಿ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು. ಗ್ರಾ. ಪಂ. ಮಟ್ಟದಲ್ಲೂ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಬೇಕು.
ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಬೇಕು. ಎಲ್ಲಾ ಬಡವರಿಗೂ ತಿಂಗಳ ಸಮಗ್ರ ದಿನಸಿ ಹಾಗೂ 5 ಸಾವಿರ ರೂ. ಪರಿಹಾರ ನೀಡಬೇಕು. ಕೆಲಸವಿಲ್ಲದಾಗಿರುವ ಶಿಕ್ಷಕರು, ಉಪನ್ಯಾಸಕರು, ಪತ್ರಕರ್ತರು, ವಕೀಲರು ಮುಂತಾದ ವೃತ್ತಿಪರರಿಗೂ ನೆರವು ನೀಡಬೇಕು.
ಬೀಜ, ಗೊಬ್ಬರ ಹಾಗೂ ಕೃಷಿ ಉಪಕರಣಗಳ ಬೆಲೆ ತಗ್ಗಿಸಬೇಕು ಹಾಗೂ ಸಬ್ಸಿಡಿ ಹೆಚ್ಚಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು