Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಎಚ್ಚರಿಕೆಯಿಂದಿದ್ದು ಜಾಗೃತರಾಗಿರಲು ಸಲಹೆ

ಎಚ್ಚರಿಕೆಯಿಂದಿದ್ದು ಜಾಗೃತರಾಗಿರಲು ಸಲಹೆ

ಸುದ್ದಿಕಿರಣ ವರದಿ
ಗುರುವಾರ, ಜನವರಿ 6, 2022

ಎಚ್ಚರಿಕೆಯಿಂದಿದ್ದು ಜಾಗೃತರಾಗಿರಲು ಸಲಹೆ
ಬ್ರಹ್ಮಾವರ: ಬಹುತೇಕ ಅಪರಾಧಗಳ ಸಂದರ್ಭಗಳಲ್ಲಿ ಸೃಷ್ಟಿಯಾದ ಸನ್ನಿವೇಶಗಳು ಅಪರಾಧ ಮಾಡಲು ಅವಕಾಶ ನೀಡುತ್ತವೆ. ಅಪರಾಧ ತಡೆ ನಮ್ಮಿಂದಲೇ ಆರಂಭಗೊಳ್ಳುತ್ತದೆ. ಸಾಮಾನ್ಯ ತಿಳುವಳಿಕೆಯಿಂದ ಮತ್ತು ಅಪರಾಧ ತಡೆಗಟ್ಟುವ ತಂತ್ರಗಳನ್ನು ರೂಢಿಸಿಕೊಳ್ಳುವುದರಿಂದ ಅಪರಾಧ ಸಂಖ್ಯೆಯನ್ನು ಕಡಿಮೆಗೊಳಿಸಬಹುದು ಎಂದು ಬ್ರಹ್ಮಾವರ ಸಬ್ ಇನ್ಸ್ಪೆಕ್ಟರ್ ಗುರುನಾಥ ಬಿ. ಹಾದಿಮನಿ ಹೇಳಿದರು.

ಇಲ್ಲಿನ ಕ್ರಾಸ್ ಲ್ಯಾಂಡ್ ಕಾಲೇಜಿನಲ್ಲಿ ಈಚೆಗೆ ಬ್ರಹ್ಮಾವರ ರೋಟರಿ ಕ್ಲಬ್ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆ ಸಹಯೋಗದಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಂಚಕರ ಮೋಸದ ಜಾಲ, ಆಮಿಷಗಳಿಗೆ ನಾಗರಿಕರು ಒಳಗಾಗಿ ಹಣ, ಆಭರಣ ಕಳೆದುಕೊಳ್ಳುತ್ತಿದ್ದು ಆ ಬಗ್ಗೆ ಜಾಗೃತರಾಗಿರಬೇಕು. ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಮನೆಯ ಬಾಗಿಲಿಗೆ ಪ್ಯಾಡ್ಲಾಕ್ ಬದಲು ಡೋರ್ ಲಾಕ್ ಹಾಕಿ, ರಾತ್ರಿ ವೇಳೆ ಮನೆಯ ಸುತ್ತ ಬೆಳಕು ಇರುವಂತೆ ವಿದ್ಯುತ್ ದೀಪ ಅಳವಡಿಸಿಕೊಂಡಲ್ಲಿ ಅಪರಾಧ ಕಡಿಮೆ ಆಗುತ್ತದೆ ಎಂದರು.

ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳನ್ನು ಚಲಾಯಿಸದೇ, ಮಾದಕ ದ್ಯವ್ಯದ ಜಾಲಕ್ಕೆ ಸಿಲುಕದೇ ಜೀವನವನ್ನು ಸಾಗಿಸಲು ಮುಂದೆ ಬರಬೇಕು ಎಂದರು.

ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಜಾನ್ಸನ್ ಜೇಕಬ್, ರೋಟರಿ ಕಾರ್ಯದರ್ಶಿ ಸತೀಶ್ ಶೆಟ್ಟಿ, ರೋಟರಿ ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್, ಉಪನ್ಯಾಸಕ ನವೀನ್ ಕುಮಾರ್ ಶೆಟ್ಟಿ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!