Thursday, July 7, 2022
Home ಸಮಾಚಾರ ಸಂಘಸಂಗತಿ ಜಾನಪದ ಕಲೆಯನ್ನು ಉಳಿಸಿ ಬೆಳೆಸಿ

ಜಾನಪದ ಕಲೆಯನ್ನು ಉಳಿಸಿ ಬೆಳೆಸಿ

ಜಾನಪದ ಕಲೆಯನ್ನು ಉಳಿಸಿ ಬೆಳೆಸಿ

ಉಡುಪಿ: ಜನರಿಂದ ಜನರಿಗೆ ಜ್ಞಾನದಿಂದ ಬರುವ ಕಲೆಯೇ ಜಾನಪದ. ಜಾನಪದವನ್ನು ಉಳಿಸಿ ಬೆಳೆಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಲಯನ್ಸ್ ಕ್ಲಬ್ ಸಿಟಿ ಸೆಂಟರ್ ವತಿಯಿಂದ ಆಯೋಜಿಸಲಾದ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿಮಾತನಾಡಿದರು.

ಇದೇ ಧ್ಯೇಯದೊಂದಿಗೆ ಆರಂಭವಾದ ಕರ್ನಾಟಕ ಜಾನಪದ ಪರಿಷತ್ತು ಯುವಕರಿಗೆ ಜಾನಪದ ಕಲೆ ಬಗ್ಗೆ ಶಿಕ್ಷಣ ನಿಡುತ್ತಿದೆ.

ರಾಜ್ಯದಾದ್ಯಂತ ತಮ್ಮದೇ ಆದ ಜಾನಪದ ಕಲೆ ಹಾಗೂ ಸಂಸ್ಕೃತಿಯ ಜನರನ್ನು ಸಂಪರ್ಕಿಸಿ ಅವರಲ್ಲಿರುವ ಕಲಾ ನೈಪುಣ್ಯತೆಯನ್ನು ಗುರುತಿಸಿ ಕಲೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸಬೇಕು ಎಂದರು.

ಕ್ಲಬ್ ಅಧ್ಯಕ್ಷ ಎ. ನಾಗೇಶ ರಾವ್ ಸ್ವಾಗತಿಸಿ, ತಲ್ಲೂರು ಶಿವರಾಮ ಶೆಟ್ಟರನ್ನು ಸಮ್ಮಾನಿಸಿ, ಗೌರವಿಸಿದರು.

ಲಯನ್ಸ್ ಸಿಟಿ ಸೆಂಟರ್ ವಲಯಾಧ್ಯಕ್ಷ ಕೆ. ಎನ್. ಅಶೋಕ ಆಚಾರ್ಯ ಶುಭಾಶಂಸನೆಗೈದರು.

ಲಯನ್ಸ್ ವಲಯ ಕಾರ್ಯದರ್ಶಿ ಜಿ. ಆರ್. ಪ್ರಕಾಶ್, ಕೋಶಾಧಿಕಾರಿ ಕಾಶಿನಾಥ್ ಕೆ. ಆರ್, ಲಿಯೊ ಆಫಿಕ್ ಸಾಲ್ಯಾನ್, ಲಯನ್ಸ್ ಕ್ಲಬ್ ಅಂಬಲಪಾಡಿ ಪ್ರೈಡ್ ಅಧ್ಯಕ್ಷ ಪ್ರಶಾಂತ್ ಭಂಡಾರಿ, ಲಯನ್ಸ್ ಕ್ಲಬ್ ಕರಾವಳಿ ಅಧ್ಯಕ್ಷ ರವೀಂದ್ರ ಆಚಾರ್ಯ ಇದ್ದರು.

ಶಂಕರ ಪೂಜಾರಿ ಪರಿಚಯಿಸಿದರು. ಜಯಲಕ್ಷ್ಮೀ ಪ್ರಾರ್ಥಿಸಿದರು. ಕಾರ್ಯದರ್ಶಿ ಅನಿಲ್ ಶೆಣೈ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!