Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ

ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ

ಸುದ್ದಿಕಿರಣ ವರದಿ
ಮಂಗಳವಾರ, ಏಪ್ರಿಲ್ 26

ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ
ಉಡುಪಿ: ಶಾಂಕರ ತತ್ವ ಪ್ರಸಾರ ಆಭಿಯಾನ ಉಡುಪಿ ಜಿಲ್ಲೆ ಮತ್ತು ಸ್ಥಾನಿಕ ಬ್ರಾಹ್ಮಣ ಸಂಘ ಕುಂಜಿಬೆಟ್ಟು ಸಂಯುಕ್ತ ಆಶ್ರಯದಲ್ಲಿ ಶಂಕರ ಜಯಂತಿ ಪ್ರಯುಕ್ತ ಮೇ 6ರಂದು ಬೆಳಿಗ್ಗೆ 10.30ಕ್ಕೆ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪದಲ್ಲಿ ಉಡುಪಿ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.

7ನೇ ತರಗತಿ ವರೆಗಿನ ಪ್ರಾಥಮಿಕ ವಿಭಾಗ, 8ರಿಂದ 12ನೇ ತರಗತಿ ವರೆಗಿನ ಪ್ರೌಢ ವಿಭಾಗ ಮತ್ತು 12ನೇ ತರಗತಿಯಿಂದ ಮೇಲ್ಪಟ್ಟು ಎಲ್ಲರಿಗಾಗಿ ಹಿರಿಯರ ವಿಭಾಗ ಎಂದು ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಕೀರ್ತಿಶೇಷ ಡಾ| ಎಚ್. ವಿ. ನರಸಿಂಹಮೂರ್ತಿ ವಿರಚಿತ ಶೃಂಗೇರಿ ಶ್ರೀ ಶಾರದಾಪೀಠ ಪ್ರಕಟಿಸಿರುವ ಶ್ರೀ ಶಂಕರಾಚಾರ್ಯರು- ಜೀವನ ಮತ್ತು ಸಂದೇಶ ಪುಸ್ತಕ ಆಧರಿತ ಪ್ರಶ್ನೆಗಳಿರುತ್ತವೆ.

ಮೂರೂ ವಿಭಾಗದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಸ್ಪರ್ಧೆ ದಿನದಂದು ಬಳಿಕ ನಡೆಯುವ ಸಭಾ ಸಮಾರಂಭದಲ್ಲಿ ವಿತರಿಸಲಾಗುವುದು.

ಆಸಕ್ತರು ಅದೇ ದಿನ ಶ್ರೀ ಶಾರದಾ ಮಂಟಪದಲ್ಲಿ ಸ್ಪರ್ಧೆಯ ಮೊದಲು ಹೆಸರನ್ನು ನೋಂದಾಯಿಸಿಕೊಳ್ಳಬಹುದು.

ಪುಸ್ತಕವನ್ನು ಶ್ರೀ ಶಾರದಾ ಮಂಟಪದಲ್ಲಿ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ 9481760611ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!