Saturday, August 13, 2022
Home ಸಮಾಚಾರ ಸಂಘಸಂಗತಿ ಜಿಲ್ಲಾ ವಿದ್ಯಾರ್ಥಿ ಸಮಾವೇಶ

ಜಿಲ್ಲಾ ವಿದ್ಯಾರ್ಥಿ ಸಮಾವೇಶ

ಜಿಲ್ಲಾ ವಿದ್ಯಾರ್ಥಿ ಸಮಾವೇಶ

ಉಡುಪಿ, ನ. 29 (ಸುದ್ದಿಕಿರಣ ವರದಿ): ರಾಮ್ ಸೇನಾ ಉಡುಪಿ ಜಿಲ್ಲಾ ವಿದ್ಯಾರ್ಥಿ ಸಮಾವೇಶ ಈಚೆಗೆ ಕಡಿಯಾಳಿ ಭರತಾಂಜಲಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ವಕೀಲರಾದ ಅಖಿಲ್ ಹೆಗ್ಡೆ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಸಂಘಟನೆಯ ಮಹತ್ವ, ಧರ್ಮ ಕಾರ್ಯದಲ್ಲಿ ವಿದ್ಯಾರ್ಥಿ ಶಕ್ತಿಯ ಪಾತ್ರ, ದುಶ್ಚಟಗಳಿಂದ ದೂರವಿದ್ದು ಸಮಾಜಮುಖಿ ಕಾರ್ಯದ ಮೂಲಕ ಸಮಾಜದ ಮನ ಗೆಲ್ಲಬೇಕು ಎಂದರು.

ಸನ್ಮಾನ
ಸಂಘಟನೆಯ ಸಂಸ್ಥಾಪಕರ ಸಲಹೆಯಂತೆ ಉಡುಪಿ ಜಿಲ್ಲಾ ರಾಮ್ ಸೇನಾ ಕಾನೂನು ಸಲಹೆಗಾರರಾಗಿ ನೇಮಕಗೊಂಡ ಅಖಿಲ್ ಹೆಗ್ಡೆ ಅವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು.

ಸಂಸ್ಥೆ ಗೌರವಾಧ್ಯಕ್ಷ ಡಾ. ವಿಜಯೇಂದ್ರ ವಸಂತ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಜಯರಾಂ ಅಂಬೇಕಲ್ಲು ಸಂಘಟನೆಯ ಮುಂದಿನ ಕಾರ್ಯಚಟುವಟಿಕೆ ಮತ್ತು ರೂಪುರೇಷೆ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಪ್ರಮುಖರಾದ ಸುದರ್ಶನ್ ಕಪ್ಪೆಟ್ಟು, ಹರೀಶ್ ಮಣಿಪಾಲ, ವಿಕ್ರಂ ನಿಟ್ಟೂರು, ಗಗನ್ ಪೂಜಾರಿ ಇದ್ದರು.
ಜಿಲ್ಲಾ ವಕ್ತಾರ ಶರತ್ ಮಣಿಪಾಲ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!