Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಪಣಿಯಾಡಿ ದೇವಳ ಜೀರ್ಣೋದ್ಧಾರಕ್ಕೆ ಮನವಿ

ಪಣಿಯಾಡಿ ದೇವಳ ಜೀರ್ಣೋದ್ಧಾರಕ್ಕೆ ಮನವಿ

ಉಡುಪಿ: ಪಣಿಯಾಡಿ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರು ಭಾನುವಾರ ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಇಲಾಖೆಯಿಂದ ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಸಿದರು.

ಜೀರ್ಣೋದ್ಧಾರ ಸಮಿತಿ ಸಂಚಾಲಕ ನಾಗರಾಜ ಆಚಾರ್ಯ, ಅಧ್ಯಕ್ಷರಾದ ಎಂ. ವಿಶ್ವನಾಥ ಭಟ್ ಮತ್ತು ನಾರಾಯಣ ಮಡಿ, ಪ್ರಧಾನ ಕಾರ್ಯದರ್ಶಿ ಬಿ. ವಿಜಯರಾಘವ ರಾವ್, ಕಾರ್ಯದರ್ಶಿ ಶ್ರೀನಿವಾಸ ಆಚಾರ್ಯ, ಉಪಾಧ್ಯಕ್ಷ ತಲ್ಲೂರು ಚಂದ್ರಶೇಖರ್ ಶೆಟ್ಟಿ, ಜೊತೆಕಾರ್ಯದರ್ಶಿಗಳಾದ ಸದಾಶಿವ ಪೂಜಾರಿ, ಕೃಷ್ಣಮೂರ್ತಿ, ಲಕ್ಷ್ಮೀನಾರಾಯಣ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!