Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಜುಲೈ 11ರಂದು ಗುರುವಂದನೆ

ಜುಲೈ 11ರಂದು ಗುರುವಂದನೆ

ಸುದ್ದಿಕಿರಣ ವರದಿ
ಶನಿವಾರ, ಜುಲೈ 9

ಜುಲೈ 11ರಂದು ಗುರುವಂದನೆ
ಉಡುಪಿ: ಅದಮಾರು ಮಠದ 32ನೇ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಸನ್ಯಾಸ ದೀಕ್ಷಾ ಸುವರ್ಣ ಮಹೋತ್ಸವ ಪ್ರಯುಕ್ತ ಶ್ರೀಕೃಷ್ಣ ಸೇವಾ ಬಳಗ ಹಾಗೂ ಅದಮಾರು ಮಠ ವತಿಯಿಂದ ಜುಲೈ 11ರಂದು ಸಂಜೆ 4.30ಕ್ಕೆ ಇಲ್ಲಿನ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಗುರುವಂದನೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಕೃಷ್ಣ ಸೇವಾ ಬಳಗ ಸಂಚಾಲಕ ಡಾ| ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದಮಾರು ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕರ್ನೂಲು ವಿ. ಶ್ರೀನಿವಾಸ ಆಚಾರ್ಯ ಅಭಿನಂದನಾ ಭಾಷಣ ಮಾಡಲಿದ್ದಾರೆ ಎಂದರು.

ಪುಸ್ತಕ ಬಿಡುಗಡೆ
ಈ ಸಂದರ್ಭದಲ್ಲಿ ಓಂಪ್ರಕಾಶ್ ಭಟ್ ಮತ್ತು ದೇವಿದಾಸ್ ಸಂಪಾದಕತ್ವದ ಕೃಷ್ಣಪ್ರಿಯ- ವಿಶ್ವಪ್ರಿಯ ಪುಸ್ತಕ ಮತ್ತು ವಿಶ್ವೇಶದಾಸ ಮತ್ತು ಓಂಪ್ರಕಾಶ ಭಟ್ ಸಂಪಾಕತ್ವದ 2020- 22ರ ಅದಮಾರು ಪರ್ಯಾಯದ ಸ್ಮರಣ ಸಂಚಿಕೆ ವಿಶ್ವಪ್ರಿಯ- ಈಶಪ್ರಿಯ ಪುಸ್ತಕಗಳ ಅನಾವರಣ ನಡೆಯಲಿದೆ.

ಅದಮಾರು ಮಠದ ತೃತೀಯ ವರ್ಷದ ಶ್ರೀ ನರಹರಿತೀರ್ಥ ಪ್ರಶಸ್ತಿಯನ್ನು ಪೆರುವೋಡಿ ನಾರಾಯಣ ಭಟ್ಟ ಪುತ್ತೂರು ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ವಿಶ್ವಾರ್ಪಣಂ ಮುಂದುವರಿಕೆ
ಅದಮಾರು ಮಠ ಪರ್ಯಾಯ ಸಂದರ್ಭ ಶ್ರೀಗಳ ವಿಶೇಷ ಆಯೋಜನೆಯೊಂದಿಗೆ ಆರಂಭಗೊಂಡಿದ್ದ ವಿಶ್ವಾರ್ಪಣಮ್ ಕಾರ್ಯಕ್ರಮವನ್ನು ಮುಂದುವರಿಸುವ ನಿಟ್ಟಿನಲ್ಲಿ ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಅನುಗ್ರಹ ಹಾಗೂ ಶ್ರೀ ಈಶಪ್ರಿಯತೀರ್ಥರ ಆಶಯ ಮಾರ್ಗದರ್ಶನದೊಂದಿಗೆ ಜುಲೈ 10ರಂದು ಸಂಜೆ 4.30ಕ್ಕೆ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ ಎಂದು ಶ್ರೀಕೃಷ್ಣ ಸೇವಾ ಬಳಗದ ಸಂಚಾಲಕ ರಾಘವೇಂದ್ರ ರಾವ್ ತಿಳಿಸಿದರು.

ಶ್ರೀಕೃಷ್ಣ ಸೇವಾ ಬಳಗದ ಓಂಪ್ರಕಾಶ್ ಭಟ್, ಪುರುಷೋತ್ತಮ್ ಅಡ್ವೆ ಮತ್ತು ಗೋವಿಂದರಾಜ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!